ನೀರೂರಿಸುವ ಮೀನು ಖಾದ್ಯ

7

ನೀರೂರಿಸುವ ಮೀನು ಖಾದ್ಯ

Published:
Updated:
ನೀರೂರಿಸುವ ಮೀನು ಖಾದ್ಯ

ಪಾಂಫ್ಲೆಟ್‌ ಫ್ರೈ‌‌‌‌
ಸಾಮಗ್ರಿಗಳು:
1 ಕೆ.ಜಿ. ಪಾಂಫ್ಲೆಟ್‌ ಫಿಶ್, ಉಪ್ಪು – ರುಚಿಗೆ ತಕ್ಕಷ್ಟು, ಕಾರದಪುಡಿ – 4ಚಮಚ, ಮೊಟ್ಟೆ – 1, ಅರಿಸಿನ – 1/4 ಚಮಚ, ರವೆ –ಸ್ವಲ್ಪ, ಎಣ್ಣೆ, ನಿಂಬೆರಸ

ಮಾಡುವ ವಿಧಾನ: ಸ್ವಚ್ಛಗೊಳಿಸಿದ ಪಾಂಫ್ಲೆಟ್‌ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅರ್ಧ ಗಂಟೆ ಬಿಡಬೇಕು. ಇನ್ನೊಂದು ಪಾತ್ರೆಯಲ್ಲಿ ಕಾರದಪುಡಿ, ಉಪ್ಪು, ಅರಿಶಿನಪುಡಿ ಮತ್ತು ಮೊಟ್ಟೆಯನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಮಿಶ್ರಣ ಸ್ವಲ್ಪ ಗಟ್ಟಿಯಾಗಿರಬೇಕು. ನಂತರ ಆ ಮಿಶ್ರಣವನ್ನು ಮೀನಿಗೆ ಚೆನ್ನಾಗಿ ಸವರಿ ಒಂದು ಗಂಟೆ ಇಡಬೇಕು. ನಂತರ ಮೀನನ್ನು ರವೆಯಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ರುಚಿಕರವಾದ ಪಾಂಫ್ಲೆಟ್‌ ಫಿಶ್ ಫ್ರೈ ರೆಡಿ.

*
ಅಂಜಲ್‌ ಫ್ರೈ 
ಸಾಮಗ್ರಿಗಳು: ಅಂಜಲ್ ಮೀನಿನ ತುಂಡುಗಳು – 4–5, ಕಾರದಪುಡಿ– 2 ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಅರಿಶಿನ – 1/4 ಚಮಚ , ಹುಣಸೆಹಣ್ಣು – ನಿಂಬೆ ಗಾತ್ರದ್ದು , ರವೆ– ಸ್ವಲ್ಪ, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಅಂಜಲ್ ತುಂಡುಗಳನ್ನು ಶುಚಿ ಮಾಡಿಟ್ಟುಕೊಳ್ಳಬೇಕು. ಒಂದು ಬಟ್ಟಲಿಗೆ ಅರಿಸಿನ, ಕಾರದ ಪುಡಿ, ಉಪ್ಪು, ಹುಣಸೆಹಣ್ಣಿನ ರಸ ಹಾಕಿ, ಚೆನ್ನಾಗಿ ಕಲಸಿ. ಈ ಮಿಶ್ರಣ ಗಟ್ಟಿಯಾಗಿರಬೇಕು. ಮೀನಿನ ತುಂಡುಗಳಿಗೆ ಆ ಮಿಶ್ರಣವನ್ನು ಲೇಪಿಸಿ ಎರಡು ಗಂಟೆ ಕಾಲ ಇಡಿ. ನಂತರ ತವಾಕ್ಕೆ ಎರಡರಿಂದ 3 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೀನಿನ ತುಂಡುಗಳನ್ನು ರವೆಯಲ್ಲಿ ಅದ್ದಿ ತವಾಗೆ ಹಾಕಿ. ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ ಮತ್ತೊಂದು ಬದಿಯನ್ನು 10 ನಿಮಿಷ ಬೇಯಿಸಿದರೆ ಅಂಜಲ್‌ ಫ್ರೈ ಸಿದ್ಧ.

*
ಸಿಗಡಿ ಫ್ರೈ
ಸಾಮಗ್ರಿಗಳು:
ಸ್ವಚ್ಛಗೊಳಿಸಿದ ಸಿಗಡಿ – 500 ಗ್ರಾಂ, ಕಾರದಪುಡಿ–2 ಟೇಬಲ್‌ ಚಮಚ, ಅರಿಸಿನಪುಡಿ - 1/2ಚಮಚ, ಎಣ್ಣೆ - 5 ಚಮಚ, ದನಿಯಾಪುಡಿ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಈರುಳ್ಳಿ - 1,  ಕರಿಬೇವಿನ ಎಲೆ – 7-8, ನಿಂಬೆರಸ –ಸ್ವಲ್ಪ, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಕಾರದಪುಡಿ, ದನಿಯಾ, ಅರಿಸಿನ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ, ಸುಮಾರು ಹತ್ತು ನಿಮಿಷ ಇಡಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಸಿಗಡಿ ಮಿಶ್ರಣವನ್ನು ಹಾಕಿ. ಇದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ. ಬಳಿಕ ನೀರು ಹಾಕಿ ಬೇಯಿಸಿ. ಚೆನ್ನಾಗಿ ತಿರುವುತ್ತಾ ಸಿಗಡಿಯ ಎಲ್ಲಾ ಭಾಗಗಳು ಸರಿಯಾಗಿ ಬೇಯುವಂತೆ ಇನ್ನಷ್ಟು ಹುರಿಯಿರಿ. ಕೊನೆಗೆ ನಿಂಬೆರಸ ಹಿಂಡಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry