ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಬೇರರ ಸಂಖ್ಯೆಯಲ್ಲಿ ಹೆಚ್ಚಳ

ಒಟ್ಟು ಸಂಪತ್ತಿನ ಲೆಕ್ಕದಲ್ಲಿ ಭಾರತ 6ನೇ ಸ್ಥಾನದಲ್ಲಿ
Last Updated 23 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಅತಿ ಹೆಚ್ಚು ಸಂಖ್ಯೆಯ ಕುಬೇರರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಹತ್ತು ವರ್ಷಗಳಲ್ಲಿ ಈ ಆಗರ್ಭ ಸಿರಿವಂತರ ಪಟ್ಟಿಗೆ 238 ಜನರು ಹೆಚ್ಚಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಆಫ್ರಾಏಷ್ಯಾ ಬ್ಯಾಂಕ್‌ನ ಜಾಗತಿಕ ಸಂಪತ್ತು ಪರಾಮರ್ಶೆ ವರದಿಯಲ್ಲಿ ಈ ವಿವರಗಳಿವೆ. ₹ 6,500 ಕೋಟಿಗಿಂತಲೂ ಹೆಚ್ಚು ಸಂಪತ್ತು ಹೊಂದಿದವರನ್ನು ಕುಬೇರರು ಎಂದು ಪರಿಗಣಿಸಲಾಗುತ್ತಿದೆ.

ಸದ್ಯಕ್ಕೆ ದೇಶದಲ್ಲಿ ಇಂತಹ ಕುಬೇರರ ಸಂಖ್ಯೆ 119 ಇದೆ. 2027ರ ಹೊತ್ತಿಗೆ ಇವರ ಸಂಖ್ಯೆ 357ಕ್ಕೆ ಏರುವ ನಿರೀಕ್ಷೆ ಇದೆ. ಮುಂದಿನ 10 ವರ್ಷಗಳಲ್ಲಿ 238 ಕುಬೇರರು ಹೆಚ್ಚುವರಿಯಾಗಿ ಸೃಷ್ಟಿಯಾಗಲಿದ್ದಾರೆ. ಚೀನಾದಲ್ಲಿ ಇಂತಹ ಹೊಸ ಶ್ರೀಮಂತರ ಸಂಖ್ಯೆ 448ಕ್ಕೆ ತಲುಪಲಿದೆ. ಅಮೆರಿಕದಲ್ಲಿ ಗರಿಷ್ಠ ಎನ್ನಬಹುದಾದ 884  ಕುಬೇರರು ಇರಲಿದ್ದಾರೆ.

ದೇಶದ ಜನರು ಹೊಂದಿರುವ ಒಟ್ಟಾರೆ ಸಂಪತ್ತಿನ ಲೆಕ್ಕದಲ್ಲಿ ಭಾರತ ವಿಶ್ವದಲ್ಲಿ 6ನೇ ಸ್ಥಾನದಲ್ಲಿ ಇದೆ. ಭಾರತೀಯರ ಒಟ್ಟಾರೆ ಸಂಪತ್ತು ₹ 534 ಲಕ್ಷ ಕೋಟಿಗಳಷ್ಟಿದೆ. ಈ ಲೆಕ್ಕದಲ್ಲಿ ಭಾರತ ವಿಶ್ವದಲ್ಲಿನ 6ನೇ ಸಿರಿವಂತ ದೇಶವಾಗಿದೆ. ಅಮೆರಿಕವು ₹ 4,067 ಲಕ್ಷ ಕೋಟಿಗಳಷ್ಟು ಸಂಪತ್ತಿನ ಮೂಲಕ ಮೊದಲ ಸ್ಥಾನದಲ್ಲಿ ಇದೆ.

ಸಂಪತ್ತು ಸೃಷ್ಟಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ  ಉದ್ಯಮಿಗಳು, ಉತ್ತಮ ಶಿಕ್ಷಣ ವ್ಯವಸ್ಥೆ, ಐ.ಟಿ ಕ್ಷೇತ್ರ, ಹೊರಗುತ್ತಿಗೆ, ರಿಯಲ್‌ ಎಸ್ಟೇಟ್‌, ಆರೋಗ್ಯ ರಕ್ಷಣೆ ಮತ್ತು ಮಾಧ್ಯಮ ಕ್ಷೇತ್ರಗಳು ಸಂಪತ್ತು ಹೆಚ್ಚಳಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಂತ ತ್ವರಿತವಾಗಿ ಸಂಪತ್ತು ವೃದ್ಧಿಯಾಗುವ ದೇಶಗಳ ಸಾಲಿನಲ್ಲಿ ಭಾರತ, ಚೀನಾ, ಶ್ರೀಲಂಕಾ, ಮಾರಿಷಸ್‌ ಮತ್ತು ವಿಯೆಟ್ನಾಂ ದೇಶಗಳಿವೆ.

ಮುಂದಿನ 10 ವರ್ಷಗಳಲ್ಲಿ ಜಾಗತಿಕ ಸಂಪತ್ತು ₹ 20,865 ಲಕ್ಷ ಕೋಟಿಗಳಿಗೆ ಏರಲಿದೆ.

ಗಮನಾರ್ಹ ಸಂಖ್ಯೆಯಲ್ಲಿ ಕುಬೇರರು ಹೊಸದಾಗಿ ಸೃಷ್ಟಿಯಾಗಲಿರುವ ದೇಶಗಳ ಸಾಲಿನಲ್ಲಿ ರಷ್ಯಾ (142), ಇಂಗ್ಲೆಂಡ್‌ (113), ಜರ್ಮನಿ (90), ಹಾಂಕಾಂಗ್‌ (78) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT