ನಿಂತಿದ್ದ ಲಾರಿಗೆ ಕಾರ್‌ ಡಿಕ್ಕಿ: ಉದಯ ಚಾನಲ್ ನಿರೂಪಕ ಸಾವು

7

ನಿಂತಿದ್ದ ಲಾರಿಗೆ ಕಾರ್‌ ಡಿಕ್ಕಿ: ಉದಯ ಚಾನಲ್ ನಿರೂಪಕ ಸಾವು

Published:
Updated:
ನಿಂತಿದ್ದ ಲಾರಿಗೆ ಕಾರ್‌ ಡಿಕ್ಕಿ: ಉದಯ ಚಾನಲ್ ನಿರೂಪಕ ಸಾವು

ದಾವಣಗೆರೆ: ಹರಿಹರ ತಾಲ್ಲೂಕು ಹನಗವಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಉದಯ ಮ್ಯೂಸಿಕ್ ಚಾನೆಲ್‌ನ ಕಾರ್ಯಕ್ರಮ ನಿರೂಪಕ ಚಂದ್ರಶೇಖರ(34), ಸಂತೋಷಿ (24) ಮೃತಪಟ್ಟಿದ್ದಾರೆ.

ಕಿರುತೆರೆ ಕಲಾವಿದರಾದ ರಾಮು ಮತ್ತು ಸುನೀತಾರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ದಾವಣಗೆರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ರಸ್ತೆ ಪಕ್ಕದಲ್ಲಿ ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಜರುಗಿದೆ. ಹರಿಹರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರಶೇಖರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry