ನಗರದಲ್ಲಿ ಮಳೆ: 6 ಮರಗಳು ಧರೆಗೆ

7

ನಗರದಲ್ಲಿ ಮಳೆ: 6 ಮರಗಳು ಧರೆಗೆ

Published:
Updated:
ನಗರದಲ್ಲಿ ಮಳೆ: 6 ಮರಗಳು ಧರೆಗೆ

ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಬಹುತೇಕ ಎಲ್ಲ ಪ್ರದೇಶಗಳಲ್ಲೂ ಮಳೆಯಾಗಿದೆ. ಸುಮಾರು 21 ಮಿಲಿಮೀಟರ್‌ ಮಳೆ ಪ್ರಮಾಣ ದಾಖಲಾಗಿದೆ. ತಂಪು ಹವೆ, ಮೋಡ ಕವಿದ ವಾತಾವರಣವಿದೆ.

ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾದ ಮಳೆ ಸಂಜೆವರೆಗೂ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಕೆಲವೆಡೆ ರಸ್ತೆಯ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಯಿತು.

ವಿವಿಧ ಪ್ರದೇಶಗಳಲ್ಲಿ 6 ಮರಗಳು ಧರೆಗುರುಳಿವೆ. ಶಂಕರಮಠ, ನೀಲಸಂದ್ರ, ಮಲ್ಲೇಶ್ವರ, ಕಲ್ಯಾಣನಗರ, ವಿಲ್ಸನ್‌ ಗಾರ್ಡನ್‌, ಲೋಕೋಪಯೋಗಿ ಇಲಾಖೆ ವಸತಿ ಗೃಹಗಳ ಪ್ರದೇಶದಲ್ಲಿ ತಲಾ ಒಂದೊಂದು ಮರಗಳು ಉರುಳಿಬಿದ್ದಿವೆ.

ಮಳೆ ಹಾನಿ ಸಂಬಂಧಿಸಿ ಬಿಬಿಎಂಪಿ ಕಚೇರಿಗೆ ಸುಮಾರು 60 ಕರೆಗಳು ಬಂದಿವೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry