ಸಿದ್ದ ಹಲಸಿನ ತಳಿಗೆ ಬೇಡಿಕೆ

7

ಸಿದ್ದ ಹಲಸಿನ ತಳಿಗೆ ಬೇಡಿಕೆ

Published:
Updated:
ಸಿದ್ದ ಹಲಸಿನ ತಳಿಗೆ ಬೇಡಿಕೆ

ಬೆಂಗಳೂರು: ಹೆಸರಘಟ್ಟ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯು ಅಯೋಜಿಸಿದ್ದ ಮಾವು ಮತ್ತು ಹಲಸಿನ ತಳಿ ವೈವಿಧ್ಯತಾ ಮೇಳದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ಬಂದ ರೈತರು ತುಮಕೂರಿನ ರೈತ ಸಿದ್ದಪ್ಪ ಅವರ ‘ಸಿದ್ದ ಹಲಸಿನ ತಳಿ’ಗೆ ಹೆಚ್ಚಿನ ಬೇಡಿಕೆಯನ್ನು ಸಲ್ಲಿಸಿದರು. ಮೇಳದಲ್ಲಿ ಬಿಡುಗಡೆಗೊಂಡ ಶಂಕರಯ್ಯ ಅವರ ಕೆಂಪು ಹಲಸಿನ ತೊಳೆ ತಳಿಗೂ ರೈತರು ಆಸಕ್ತಿ ತೋರಿಸಿದರು. 10 ಸಾವಿರ ಮಾವು ಮತ್ತು ಹಲಸಿನ ತಳಿಗಳಿಗೆ ರೈತರು ಬೇಡಿಕೆ ಸಲ್ಲಿಸಿದರು. 23 ಕೆ.ಜಿ.ಯಷ್ಟು ಭಾರವಿದ್ದ ವಿಜಯನಗರ ಹಲಸಿನ ತಳಿಯ ಹಣ್ಣು ಎಲ್ಲರ ಗಮನ ಸೆಳೆಯಿತು.

ಚಿತ್ರದುರ್ಗದ ರೈತ ಸಂಗಣ್ಣ, ‘ಸಿದ್ದ ಹಲಸು ತಿನ್ನಲು ತುಂಬಾ ರುಚಿ ಇದೆ. ಒಂದು ಹಣ್ಣಿನಲ್ಲಿ ಸುಮಾರು ನೂರು ತೊಳೆಗಳು ಬರುತ್ತವೆ. ಇಂತಹ ಹಲಸನ್ನು ಬೆಳೆದರೆ ರೈತರು ನಾಲ್ಕು ಕಾಸು ಸಂಪಾದಿಸಬಹುದು. 20 ತಳಿಗಳು ಬೇಕೆಂದು ಹೇಳಿದ್ದೇನೆ’ ಎಂದರು.

ರಸಪುರಿ, ಮತ್ತು ಬಾದಾಮಿ ಮಾವಿನ ಹಣ್ಣುಗಳು ಆರು ಟನ್‍ಗಳಷ್ಟು ಮಾರಾಟವಾದವು. ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ನಿರ್ದೇಶಕ ಎಂ.ಅರ್. ದಿನೇಶ್ ಪ್ರತಿಕ್ರಿಯಿಸಿ, ‘ಹಲಸು ಮತ್ತು ಮಾವಿನ ಹಣ್ಣಿನ ತಳಿಗಳಿಗೆ ಸುಮಾರು ಹತ್ತು ಸಾವಿರ ಬೇಡಿಕೆಗಳು ಬಂದಿವೆ. ಮುಂದಿನ ಹಂತದಲ್ಲಿ ರೈತರಿಗೆ ತಳಿಗಳನ್ನು ತಲುಪಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry