ಬೆಳಗಿನ ಜಾವದ 'ಸೆಹರಿ'ಗಾಗಿ ಮುಸ್ಲಿಂ ಬಾಂಧವರನ್ನು ಎಬ್ಬಿಸುತ್ತಿರುವ ಸಿಖ್ ವ್ಯಕ್ತಿ; ವಿಡಿಯೊ ವೈರಲ್

7

ಬೆಳಗಿನ ಜಾವದ 'ಸೆಹರಿ'ಗಾಗಿ ಮುಸ್ಲಿಂ ಬಾಂಧವರನ್ನು ಎಬ್ಬಿಸುತ್ತಿರುವ ಸಿಖ್ ವ್ಯಕ್ತಿ; ವಿಡಿಯೊ ವೈರಲ್

Published:
Updated:
ಬೆಳಗಿನ ಜಾವದ 'ಸೆಹರಿ'ಗಾಗಿ ಮುಸ್ಲಿಂ ಬಾಂಧವರನ್ನು ಎಬ್ಬಿಸುತ್ತಿರುವ ಸಿಖ್ ವ್ಯಕ್ತಿ; ವಿಡಿಯೊ ವೈರಲ್

ಜಮ್ಮು: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಖ್ ವ್ಯಕ್ತಿಯೊಬ್ಬರು ರಮ್ಜಾನ್ ಉಪವಾಸ ವ್ರತಾಚರಣೆ ಮಾಡುತ್ತಿರುವ ಮುಸ್ಲಿಂ ಬಾಂಧವರನ್ನು ಬೆಳಗಿನ ಜಾವದ ಸೆಹರಿಗಾಗಿ ಎಬ್ಬಿಸುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಹಿರಿಯ ನಾಗರಿಕರಾದ ಸಿಖ್ ವ್ಯಕ್ತಿಯೊಬ್ಬರು ಡ್ರಮ್ ಬಡಿದುಕೊಂಡು ನೆರೆಹೊರೆಯ ಮುಸ್ಲಿಮರನ್ನು ಎಬ್ಬಿಸುತ್ತಿರುವ ವಿಡಿಯೊ ಇದಾಗಿದೆ.

ಅಲ್ಲಾಹ್ ರಸೂಲ್ ದೆ ಪ್ಯಾರೋ, ಜನ್ನತ್ ದೇ ತಲಬ್‍ಗರೋ, ಉಠೋ ರೋಜಾ ರಖೋ (ಅಲ್ಲಾಹುವನ್ನು ಪ್ರೀತಿಸುವವರು, ಸ್ವರ್ಗ ಬಯಸುವವರು, ಎದ್ದೇಳಿ ಉಪವಾಸ ಆರಂಭಿಸಿ) ಎಂದು ಈ ಸಿಖ್ ವ್ಯಕ್ತಿ ಹೇಳುತ್ತಾ ಸಾಗುವ 21 ಸೆಕೆಂಡ್ ಅವಧಿಯ ದೃಶ್ಯ ಇಲ್ಲಿದೆ.

ಕಾಶ್ಮೀರದಲ್ಲಿ ಸೌಹಾರ್ದತೆಯನ್ನು ಸಾರುತ್ತಿರುವ ಈ ಸಿಖ್ ವ್ಯಕ್ತಿಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry