7
ದಾಖಲಾತಿ ಪ್ರಕ್ರಿಯೆ ಚುರುಕು, ಪಠ್ಯಪುಸ್ತಕ ವಿತರಣೆ ಆರಂಭ

ಶಾಲೆ, ಕಾಲೇಜಿಗೆ ಪ್ರವೇಶ ಆರಂಭ

Published:
Updated:
ಶಾಲೆ, ಕಾಲೇಜಿಗೆ ಪ್ರವೇಶ ಆರಂಭ

ಬಳ್ಳಾರಿ: ಜೂನ್‌ ತಿಂಗಳು ಹೊಸ್ತಿಲ ಲ್ಲಿರುವ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಚುರುಕುಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆಯೂ ಸೋಮವಾರ ಆರಂಭವಾಗಿದೆ.

ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಸೋಮವಾರ ವಿದ್ಯಾರ್ಥಿಗಳು, ಪೋಷ ಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡರು.

ಪ್ರಥಮ ಪಿಯುಸಿಗೆ ದಾಖಲಾತಿ ಬಯಸಿ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಸಾಲುಗಟ್ಟಿದ್ದರು. ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಹಲವು ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವರಿಗೆ ವರ್ಗಾವಣೆ ಪ್ರಮಾಣಪತ್ರ ವಿತರಣೆಯೂ ಪ್ರೌಢಶಾಲೆ ವಿಭಾಗ ದಲ್ಲಿ ನಡೆದಿತ್ತು. ‘ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಕಾರ್ಯ ಭರದಿಂದ ನಡೆದಿದೆ’ ಎಂದು ಡಿಡಿಪಿಐ ಓ.ಶ್ರೀಧರನ್‌ ತಿಳಿಸಿದರು

ಉರ್ದು, ತೆಲುಗು ಪುಸ್ತಕ ಬಂದಿಲ್ಲ

ಬಳ್ಳಾರಿ: ‘ಸರ್ಕಾರಿ ಶಾಲೆಗಳಿಗೆ ವಿತರಿಸಲು 1ರಿಂದ 10ನೇ ತರಗತಿವರೆಗಿನ ಬಹುತೇಕ ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಉರ್ದು ಮತ್ತು ತೆಲುಗು ಮಾಧ್ಯಮದ ಯಾವುದೇ ಪಠ್ಯಪುಸ್ತಕ ಪೂರೈಕೆಯಾಗಿಲ್ಲ’ ಎಂದು ಡಿಡಿಪಿಐ ಓ.ಶ್ರೀಧರನ್‌ ತಿಳಿಸಿದರು. ‘3ನೇ ತರಗತಿಯ ನಲಿಕಲಿ– ಗಣಿತ ಮತ್ತು ಪರಿಸರ ಅಧ್ಯಯನ ಪುಸ್ತಕ ಹಾಗೂ 10ನೇ ತರಗತಿಯ ಗಣಿತ ಭಾಗ–1 ಪುಸ್ತಕ ಇನ್ನೂ ಪೂರೈಕೆಯಾಗಿಲ್ಲ’ ಎಂದರು.

ಇನ್ನು ‘ಮಿಂಚಿನ ಸಂಚಾರ’

ಬಳ್ಳಾರಿ: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ತರಗತಿಗಳು ಪುನರಾರಂಭವಾಗುವುದರಿಂದ, ಮೇ 29ರಿಂದಲೇ ‘ಮಿಂಚಿನ ಸಂಚಾರ’ವನ್ನು ಆರಂಭಿಸಲಾಗುವುದು. ಸೋಮವಾರದಿಂದ ಶಾಲೆಗಳು ಆರಂಭಗೊಂಡಿದ್ದು, ತರಗತಿಗಳನ್ನು ನಡೆಸಲು ಬೇಕಾದ ಪೂರ್ವಸಿದ್ಧತೆಗಳು ನಡೆದಿವೆ. 29ರಂದು ಆರಂಭೋತ್ಸವ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಓ.ಶ್ರೀಧರನ್‌ ’ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry