ರಾಹುಲ್ ಗಾಂಧಿಯನ್ನು ನಿಫಾ ವೈರಸ್‍ಗೆ ಹೋಲಿಸಿದ ಹರ್ಯಾಣದ ಸಚಿವ

7

ರಾಹುಲ್ ಗಾಂಧಿಯನ್ನು ನಿಫಾ ವೈರಸ್‍ಗೆ ಹೋಲಿಸಿದ ಹರ್ಯಾಣದ ಸಚಿವ

Published:
Updated:
ರಾಹುಲ್ ಗಾಂಧಿಯನ್ನು ನಿಫಾ ವೈರಸ್‍ಗೆ ಹೋಲಿಸಿದ ಹರ್ಯಾಣದ ಸಚಿವ

ನವದೆಹಲಿ: ಹರ್ಯಾಣದ ಸಚಿವ ಅನಿಲ್ ವಿಜ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನಿಫಾ ವೈರಸ್‌ಗೆ ಹೋಲಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ನಿಫಾ ವೈರಸ್‍ನಂತೆ. ಯಾವುದೇ ರಾಜಕೀಯ ಪಕ್ಷ ಅವರ ಸಂಪರ್ಕಕ್ಕೆ ಬಂದರೆ ಅವರು ನಾಶವಾಗಿ ಬಿಡುತ್ತಾರೆ ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಅನಿಲ್ ವಿಜ್ ರಾಹುಲ್ ಗಾಂಧಿ ಬಗ್ಗೆ ಟೀಕೆ, ಲೇವಡಿ ಮಾಡಿದ್ದು ಇದೇ ಮೊದಲ ಬಾರಿ ಏನೂ ಅಲ್ಲ. ರಾಹುಲ್ ಗಾಂಧಿ ಕಾಂಗ್ರೆಸ್  ಅಧ್ಯಕ್ಷರಾದಾಗ ವಿಜ್ ಅವರು ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತವನ್ನು ಕಾಂಗ್ರೆಸ್  ಮುಕ್ತವಾಗಿಸುವುದಕ್ಕೆ ಇದು ಸಹಕಾರಿಯಾಗುತ್ತದೆ ಎಂದು ಹೇಳಿದ್ದರು. 

ಅನಿಲ್ ವಿಜ್ ವಿವಾದಿತ ಹೇಳಿಕೆಗಳು

ಮಮತಾ ಬ್ಯಾನರ್ಜಿ ಸಮುದ್ರಕ್ಕೆ ಹಾರಲಿ
ಭಾರತೀಯಳಾಗಿ ಹುಟ್ಟಿದ್ದಕ್ಕೆ ನಾಚಿಕೆಯಾಗುತ್ತಿದೆ ಎಂದಾದರೆ ಮಮತಾ ಬ್ಯಾನರ್ಜಿ ಅವರು ಸಮುದ್ರಕ್ಕೆ ಹಾರಲಿ. ಕೊಲ್ಕತ್ತಾದಲ್ಲಿ ಸಮುದ್ರ ಹತ್ತಿರವೇ ಇದೆ, ಅಲ್ಲೇ ಹಾರಲಿ ಎಂದು ವಿಜ್ ಹೇಳಿದ್ದರು. ಭಾರತೀಯಳಾಗಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ವಿಜ್ ಈ ರೀತಿ ಪ್ರತಿಕ್ರಿಯಿಸಿದ್ದರು.

ಮಹಾತ್ಮ ಗಾಂಧಿಗಿಂತ ಮೋದಿ  ಬ್ರಾಂಡ್ ದೊಡ್ಡದು
2017ರಲ್ಲಿ ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್  (ಕೆವಿಐಸಿ ) ತಮ್ಮ ಕ್ಯಾಲೆಂಡರ್‍‍ನಲ್ಲಿ ಗಾಂಧೀಜಿಯ ಚಿತ್ರದ ಬದಲು ಮೋದಿಯವರ ಚಿತ್ರ ಪ್ರಕಟಿಸಿದಾಗ ಈ ರೀತಿಯ ಹೇಳಿಕೆ ನೀಡಿದ್ದರು.

ತಾಜ್ ಮಹಲ್ ಸುಂದರವಾದ ಸ್ಮಶಾನ
ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಪ್ರೇಮಸೌಧ ತಾಜ್ ಮಹಲ್ ಸುಂದರವಾದ  ಸ್ಮಶಾನ ಎಂದು ಅನಿಲ್  ವಿಜ್ ಹೇಳಿದ್ದರು .

ಗುರ್ ಮೆಹರ್‌‍ಗೆ ಬೆಂಬಲ ಸೂಚಿಸುವವರು ಪಾಕ್ ಬೆಂಬಲಿಗರು 
ದೆಹಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಗುರುಮೆಹರ್ ಕೌರ್ ಅವರ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದ ವಿಜ್, ಗುರ್‍ ಮೆಹರ್‍‍ಗೆ ಬೆಂಬಲ ಸೂಚಿಸುವವರು ಪಾಕ್ ಬೆಂಬಲಿಗರು ಅವರನ್ನು ದೇಶದಿಂದ ಹೊರಗೆ ಎಸೆಯಬೇಕು ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry