ಉಗ್ರರ ದಾಳಿ

7

ಉಗ್ರರ ದಾಳಿ

Published:
Updated:

ಕಾಬೂಲ್‌: ಅಫ್ಗಾನಿಸ್ತಾನ ರಾಜಧಾನಿಯಲ್ಲಿರುವ ಸೇನೆ ಮತ್ತು ಗುಪ್ತಚರ ಇಲಾಖೆ ಕಚೇರಿಗಳೇ ತಮ್ಮ ಗುರಿ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಗ್ರರು ಬಂದೂಕು ಹಾಗೂ ಬಾಂಬ್‌ಗಳಿಂದ ಈ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಈ ವರೆಗೆ ಯಾವುದೇ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ.

ಆಂತರಿಕ ಸಚಿವಾಲಯ ಕಟ್ಟಡಗಳಿಗೆ ಸಂಬಂಧಿಸಿದ ತನಿಖಾ ಕೇಂದ್ರದ ಬಳಿಯೇ ಬಾಂಬ್‌ ಸ್ಫೋಟಗೊಂಡಿವೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.

‘ಮೊದಲನೇ ಸ್ಫೋಟ ಆತ್ಮಹತ್ಯಾ ದಾಳಿಯಾಗಿರುವ ಸಾಧ್ಯತೆ ಇದೆ. ಆ ನಂತರ ಹಲವಾರು ಸ್ಫೋಟಗಳು ಸಂಭವಿಸಿವೆ. ಭದ್ರತಾ ಪಡೆಗಳು ಪರಿಸ್ಥಿತಿ ಅವಲೋಕನ ಮಾಡುತ್ತಿವೆ’ ಎಂದು ಆಂತರಿಕ ಸಚಿವಾಲಯದ ವಕ್ತಾರ ನಜೀಬ್‌ ದಾನಿಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry