7

ರಾಜ್ಯದ ಮಾರುಕಟ್ಟೆಗೆ ಕೋಮಿಯೊ ಮೊಬೈಲ್‌

Published:
Updated:
ರಾಜ್ಯದ ಮಾರುಕಟ್ಟೆಗೆ ಕೋಮಿಯೊ ಮೊಬೈಲ್‌

ಬೆಂಗಳೂರು: ಚೀನಾದ ಟಾಪ್‌ವೈಸ್‌ ಕಮ್ಯುನಿಕೇಷನ್ಸ್‌ನ ಕೋಮಿಯೊ ಸ್ಮಾರ್ಟ್‌ಫೋನ್‌, ತನ್ನ ಮೊಬೈಲ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

2017ರ ಸೆಪ್ಟೆಂಬರ್‌ನಲ್ಲಿ ದೇಶಿ ಮಾರುಕಟ್ಟೆ ಪ್ರವೇಶಿಸಿದ್ದ ಕೋಮಿಯೋ ಬ್ರ್ಯಾಂಡ್‌ ಈಗ ದಕ್ಷಿಣ ಭಾರತಕ್ಕೂ ಲಗ್ಗೆ ಇಟ್ಟಿದೆ. ಉತ್ತರ ಭಾರತದಲ್ಲಿನ ಯಶಸ್ಸಿನಿಂದ ಉತ್ತೇಜನಗೊಂಡು  ದಕ್ಷಿಣದ ರಾಜ್ಯಗಳಲ್ಲಿ ವಹಿವಾಟು ವಿಸ್ತರಿಸಲು ಮುಂದಾಗಿದೆ.

‘ಬಹುತೇಕ ಮೊಬೈಲ್‌ ತಯಾರಿಕಾ ಸಂಸ್ಥೆಗಳು  ಆನ್‌ಲೈನ್‌ ಮಾರುಕಟ್ಟೆಗೆ ಗಮನ ಕೇಂದ್ರೀಕರಿಸಿದ್ದರೆ, ಕೋಮಿಯೊ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿನ ಮಳಿಗೆಗಳ ಮೂಲಕ ನೇರ ಮಾರಾಟಕ್ಕೆ (ಆಫ್‌ಲೈನ್‌) ಆದ್ಯತೆ ನೀಡುತ್ತಿದೆ. ಸಣ್ಣ ಪಟ್ಟಣಗಳಲ್ಲಿನ ಗ್ರಾಹಕರಲ್ಲಿ  ಮೊಬೈಲ್‌ ಕಣ್ಣಾರೆ ಕಂಡು ಖರೀದಿಸುವ ಪ್ರವೃತ್ತಿ ಹೆಚ್ಚಿಗೆ ಇದೆ. ಆ ಉದ್ದೇಶಕ್ಕೆ ಮಳಿಗೆಗಳ ಮೂಲಕ ಮಾರಾಟಕ್ಕೆ ಗಮನ ಕೇಂದ್ರೀಕರಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ಸಂಜಯ್‌ ಕಲಿರೋನಾ ಹೇಳಿದ್ದಾರೆ.

‘ಸಂಸ್ಥೆಯು ಐದು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. 4ಜಿ, ವೋಲ್ಟಿ ಸೌಲಭ್ಯದ  ಇವುಗಳ ಬೆಲೆ ₹ 5,290 ರಿಂದ  ಆರಂಭಗೊಳ್ಳುತ್ತದೆ. ಹೊಸದಾಗಿ ಪರಿಚಯಿಸುತ್ತಿರುವ ‘ಕೋಮಿಯೊ ಎಕ್ಸ್‌1 ನೋಟ್‌’ ಮೊಬೈಲ್‌ ಬೆಲೆ ₹ 10 ಸಾವಿರ ಇದೆ.

‘ಇದುವರೆಗೆ 6 ಲಕ್ಷ ಮೊಬೈಲ್‌ ಮಾರಾಟ ಮಾಡಲಾಗಿದೆ. 6 ಇಂಚ್ ಎಚ್‌ಡಿ ಪರದೆ, ಎಚ್‌ಡಿ ವಿಡಿಯೊ ಗುಣಮಟ್ಟ, ಡುಯೆಲ್‌ ಕ್ಯಾಮೆರಾ ಇದೆ. ಎರಡು ಫೇಸ್‌ಬುಕ್‌, ಎರಡು ವಾಟ್ಸ್‌ ಆ್ಯಪ್ ಸೌಲಭ್ಯಗಳು ಈ ಮೊಬೈಲ್‌ಗಳ ವೈಶಿಷ್ಟ್ಯಗಳಾಗಿವೆ.

‘ರಾಜ್ಯದಲ್ಲಿ 35 ವಿತರಕರನ್ನು ನೇಮಿಸಲಾಗಿದೆ. ಮಾರಾಟ ನಂತರದ ಸೇವೆಗೂ ಆದ್ಯತೆ ನೀಡಲಾಗಿದೆ. 30 ದಿನದಲ್ಲಿ ಫೋನ್‌ ಹಾಳಾದರೆ ಹೊಸ ಮೊಬೈಲ್‌ ನೀಡುವ, ಒಂದು ವರ್ಷದಲ್ಲಿ ಸಂಸ್ಥೆಗೆ ಮರಳಿ ಮಾರಾಟ ಮಾಡಲು ಮುಂದಾದರೆ ಶೇ 40ರ ಬೆಲೆಗೆ ಖರೀದಿಸುವ ಸೌಲಭ್ಯ ಇದೆ. ಬುಧವಾರದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೊಬೈಲ್‌ಗಳ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಜಿಯೊ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಸಂಜಯ್‌ ಹೇಳಿದ್ದಾರೆ.

ವೈಶಿಷ್ಟ್ಯಗಳು

* ಆಂಡ್ರಾಯ್ಡ್ ಓರಿಯೊ

* ಫೇಸ್‌ ಅನ್‌ಲಾಕ್‌ ಸೌಲಭ್ಯ

*  ಫಿಂಗರ್‌ಪ್ರಿಂಟ್‌ ಸೆನ್ಸರ್‌

* 32 ಜಿಬಿ ರ್‍ಯಾಮ್‌ ಮೆಮೊರಿ, 32 ಜಿಬಿ ರೋಂ. 128 ಜಿಬಿವರೆಗೆ ವಿಸ್ತರಣೆ ಸೌಲಭ್ಯ

*ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನ ಎರಡು ಖಾತೆಗಳಿಗೆ ಅವಕಾಶ

* ಎರಡು ದಿನಗಳವರೆಗೆ ಬಳಕೆಗೆ ಬರುವ ದೊಡ್ಡ ಬ್ಯಾಟರಿ

* 8 ಮೆಗಾ ಪಿಕ್ಸೆಲ್‌ ಡ್ಯುಯೆಲ್‌ ಕ್ಯಾಮೆರಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry