ಜೊಕೊವಿಚ್ ಜಯಭೇರಿ

7
ಫ್ರೆಂಚ್ ಓಪನ್ ಟೆನಿಸ್: ಸಿಮೊನಾ ಹೆಲೆಪ್ ಮಿಂಚಿನ ಆಟ

ಜೊಕೊವಿಚ್ ಜಯಭೇರಿ

Published:
Updated:
ಜೊಕೊವಿಚ್ ಜಯಭೇರಿ

ಪ್ಯಾರಿಸ್: ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದರು.

ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ನೊವಾಕ್ 7–6 (7–1), 6–4, 6–4 ರಿಂದ ಸ್ಪೇನ್‌ನ ಜೆವುಮ್ ಮುನಾರ್ ವಿರುದ್ಧ ಜಯಿಸಿದರು.

ಹೆಲೆಪ್‌ಗೆ ಜಯ: ಅಗ್ರಶ್ರೇಯಾಂಕದ ಆಟಗಾರ್ತಿ ಸಿಮೊನಾ ಹಲೆಪ್ ಅವರು ಮೊದಲ ಸುತ್ತಿನಲ್ಲಿ ಪ್ರಯಾಸದ ಜಯ ಗಳಿಸಿದರು.

ಹಲೆಪ್ ಅವರು 2–6, 6–1, 6–1 ಸೆಟ್‌ಗಳಿಂದ  ಅಮೆರಿಕದ ಅಲಿಸಾನ್ ರಿಸ್ಕಿ ವಿರುದ್ಧ ಗೆದ್ದರು.

ಮೊದಲ ಸೆಟ್‌ನಲ್ಲಿ  ಅಲಿಸಾನ್ ಅವರು ಉತ್ತಮವಾಗಿ ಆಡಿದರು. ನಿಖರವಾದ ಸರ್ವ್‌ಗಳು, ಚುರುಕಿನ ಡ್ರಾಪ್‌ಗಳ ಮೂಲಕ ಹಲೆಪ್ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಇದರಿಂದಾಗಿ ಅಲಿಸಾನ್ 6–2ರಿಂದ  ಗೆದ್ದರು. ಆದರೆ ನಂತರದ ಸೆಟ್‌ಗಳಲ್ಲಿ ತಿರುಗೇಟು ನೀಡಿದ ಹಲೆಪ್ ಅವರು ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.

ಮಹಿಳೆಯರ ವಿಭಾಗದ ಇನ್ನೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ  6–0, 6–4 ರಿಂದ ಸ್ಪೇನ್‌ನ ಲಾರಾ ಅರ್ರು ಬರ್ರೇನಾ ಅವರ ವಿರುದ್ಧ ಜಯಿಸಿದರು.

ಜಪಾನಿನ ನವೋಮಿ ಒಸಾಕಾ 6–4, 7–5ರಿಂದ ಕಜಕಸ್ತಾನದ ಜರೀನಾ ದಿಯಾಸ್ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry