ನದಿ ದಾಟಲು...

7

ನದಿ ದಾಟಲು...

Published:
Updated:

ಮಾಜಿ ರಾಷ್ಟ್ರಪತಿ ರಾಜಕೀಯಾತೀತರು. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ದಿನದಿಂದಲೇ ಅವರು ಪಕ್ಷಾತೀತರಾಗುತ್ತಾರೆ. ನಿವೃತ್ತಿಯ ನಂತರ ಅವರಾರೂ ಪೂರ್ವಾಶ್ರಮದ ಪಕ್ಷದೊಡನೆ ಸಂಬಂಧ ಹೊಂದಿರುವುದಿಲ್ಲ. ಅವರೊಬ್ಬ ಹಿರಿಯ ಪ್ರಜೆ ಅಷ್ಟೇ. ಹೀಗಿರುವಾಗ ಪ್ರಣವ್‌ ಮುಖರ್ಜಿ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಕಾಂಗ್ರೆಸ್‌ನವರಿಗೆ ದೊಡ್ಡ ವಿವಾದದ ವಿಷಯವಾಗಿರುವುದು ಆಶ್ಚರ್ಯಕರ.

ಪ್ರಣವ್‌ ಅವರ ನಡೆನುಡಿಯನ್ನು ಟೀಕಿಸಲು ಆ ಪಕ್ಷಕ್ಕೆ ಇರುವ ಅಧಿಕಾರವೇನು? ಆರ್‌ಎಸ್‌ಎಸ್‌ ವಿರೋಧಿಗಳಾದ ಕೆಲವು ರಾಜಕೀಯ ಧುರೀಣರು ಪ್ರಣವ್‌ ಅವರನ್ನು ಟೀಕಿಸುವುದರಲ್ಲಿ ಮುಂಚೂಣಿಯಲ್ಲಿರುವುದು ಇನ್ನೂ ಅಚ್ಚರಿ ಉಂಟು ಮಾಡಿದೆ. ಇದೇನು ಸ್ವಾಮಿ, ಹೊಳೆ ದಾಟಲು ಅಂಬಿಗನ ಅಪ್ಪಣೆಯೇ...?

– ಸತ್ಯಬೋಧ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry