ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣ ಕಾಲದಲ್ಲಿಯೇ 'ಪ್ರಣಾಳ ಶಿಶು' ಪರಿಕಲ್ಪನೆ ಇತ್ತು: ದಿನೇಶ್ ಶರ್ಮಾ

Last Updated 1 ಜೂನ್ 2018, 9:56 IST
ಅಕ್ಷರ ಗಾತ್ರ

ಲಖನೌ: ಆಧುನಿಕ ವೈದ್ಯಕೀಯ ಪ್ರಕ್ರಿಯೆಯಲ್ಲಿ ಹುಟ್ಟುವ ಪ್ರಣಾಳ ಶಿಶುಗಳು ಮಹಾಭಾರತದ ಕಾಲದಲ್ಲಿಯೇ ಇದ್ದವು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.

ಸೀತೆ ಮಣ್ಣಿನ ಮಡಿಕೆಯಲ್ಲಿ ಹುಟ್ಟಿದಳು ಎಂದು ಜನರು ಹೇಳುತ್ತಾರೆ. ಇದರರ್ಥ ರಾಮಾಯಣ ಕಾಲದಲ್ಲಿಯೇ ಪ್ರಣಾಳ ಶಿಶು ಪರಿಕಲ್ಪನೆ ಇತ್ತು ಎಂದು ಶರ್ಮಾ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಹಿಂದೆ ಮಹಾಭಾರತದ ಕಾಲದಲ್ಲಿಯೇ ಪತ್ರಿಕೋದ್ಯಮ ಆರಂಭಗೊಂಡಿತ್ತು . ಹಸ್ತಿನಾಪುರದಲ್ಲಿ ಕುಳಿತ ಸಂಜಯ, ಕುರುಕ್ಷೇತ್ರ ಯುದ್ಧವನ್ನು ದೃತರಾಷ್ಟ್ರನಿಗೆ ವಿವರಿಸಿದ್ದ. ಇದು ನೇರಪ್ರಸಾರವಲ್ಲದೆ ಮತ್ತೇನು ಎಂದು ಹೇಳಿದ್ದರು, ಅಷ್ಟೇ ಅಲ್ಲದೆ  ನಾರದರನ್ನು ಗೂಗಲ್‌ಗೆ ಹೋಲಿಕೆ ಮಾಡಿದ ಅವರು, ‘ಗೂಗಲ್‌ ಈಗಷ್ಟೇ ಆರಂಭವಾಗಿದೆ. ಆದರೆ ನಮ್ಮ ಗೂಗಲ್‌ ಬಹಳ ಹಿಂದೆಯೇ ಆರಂಭವಾಗಿತ್ತು. ನಾರದ ಮುನಿ ಮಾಹಿತಿಯ ಮೂರ್ತರೂಪವಾಗಿದ್ದರು. ನಾರದ ಎಂದು ಮೂರು ಬಾರಿ ಹೇಳುವ ಮೂಲಕ ಎಲ್ಲಿ, ಯಾವಾಗ ಬೇಕಾದರೂ ಹೋಗಿ ಮಾಹಿತಿ ನೀಡುತ್ತಿದ್ದರು’ ಎಂದು ಹೇಳಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT