ನಿಫಾ: ಕೋಯಿಕ್ಕೋಡ್‍ನಲ್ಲಿ 2 ಸಾವು

7

ನಿಫಾ: ಕೋಯಿಕ್ಕೋಡ್‍ನಲ್ಲಿ 2 ಸಾವು

Published:
Updated:
ನಿಫಾ: ಕೋಯಿಕ್ಕೋಡ್‍ನಲ್ಲಿ 2 ಸಾವು

ಕೋಯಿಕ್ಕೋಡ್‌: ನಿಫಾ ರೋಗಬಾಧಿತರಾಗಿ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ತಲಶ್ಶೇರಿ ನಿವಾಸಿಯಾದ ರೋಜಾ ಮೃತಪಟ್ಟವರು.

ಕೋಯಿಕ್ಕೋಡ್‍ನಲ್ಲಿ ನಿಫಾ ರೋಗದಿಂದ ಇಬ್ಬರು ಸಾವಿಗೀಡಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಅದೇ ವೇಳೆ ನಿಫಾ ರೋಗ ಇದೆ ಎಂದು ಚಿಕಿತ್ಸೆಗೆ ದಾಖಲಿಸಿದ್ದ ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಮಲಪ್ಪುರಂ ನಿವಾಸಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ನೆಗಟಿವ್ ಫಲಿತಾಂಶ ಬಂದಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

ಶುಕ್ರವಾರ ನಿಫಾ ವೈರಾಣು ಅನುಮಾನವಿದ್ದ ಕೆಲವರನ್ನು ಪರೀಕ್ಷೆಗೊಳಪಡಿಸಿದಾಗ ಏಳು ಜನರಿಗೆ ನಿಫಾ ಇಲ್ಲ ಎಂದು ದೃಢೀಕರಿಸಲ್ಪಟ್ಟಿದೆ. ರೋಗ ಲಕ್ಷಣಗಳಿರುವ 6 ಮಂದಿಯನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ ನಿಫಾ ಬಾಧಿತರಾಗಿ ಚಿಕಿತ್ಸೆಯಲ್ಲಿ ಉಳ್ಳವರ ಸಂಖ್ಯೆ  16 ಆಗಿದೆ.

ಇದನ್ನೂ ಓದಿ

ನಿಫಾ ಬಗ್ಗೆ ಬೇಡ ಭಯ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry