ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಡತಿ ಕೊಲ್ತಾಳೆ, ರಕ್ಷಣೆ ಕೊಡಿಸಿ..!

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನನ್ನನ್ನು ಹೆಂಡತಿ ಕೊಲ್ತಾಳೆ. ದಯವಿಟ್ಟು ನನಗೆ ಪೊಲೀಸ್‌ ಭದ್ರತೆ ಒದಗಿಸಿ...

ಹೀಗೆಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಜನತಾ ದರ್ಶನದಲ್ಲಿ ವ್ಯಕ್ತಿಯೊಬ್ಬರು ಅಹವಾಲು ಒಪ್ಪಿಸಿದರು.

‘ಮದುವೆಯಾಗಿ 16 ವರ್ಷಗಳು ಕಳೆದಿವೆ. ಹೆಂಡತಿ ಕೊಲ್ತಾಳೆ ಎಂಬ ಭಯದಿಂದ ನಾನು ಕೊಠಡಿ ಚಿಲಕ ಭದ್ರಪಡಿಸಿ ಮಲಗುತ್ತಿದ್ದೇನೆ. ಅವಳು ಕೊಲ್ಲಬಹುದು ಎಂಬ ಭಯದಿಂದ ಉಪನ್ಯಾಸಕ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಒಂದಲ್ಲ ಒಂದು ದಿನ ಅವಳು ನನ್ನನ್ನು ಕೊಲ್ಲುವುದು ಖಾತ್ರಿ...’ ಎಂದು ವ್ಯಕ್ತಿ ಗೋಗರೆದರು (ಅವರಿಗೆ ಒಬ್ಬ ಮಗಳಿದ್ದಾಳೆ. ಇನ್ನೂ ಹೆಂಡತಿಯ ಜತೆಗೇ ಇದ್ದಾರೆ).

ಮನವಿ ಸ್ವೀಕರಿಸಿದ  ಮುಖ್ಯಮಂತ್ರಿ, ‘ವಿವಾಹ ಸಂತ್ರಸ್ತ’ ನನ್ನು ಮೇಲಿಂದ ಕೆಳಗಿನವರೆಗೆ ನೋಡಿ ಕಣ್ಣಲ್ಲೇ ಅಳೆದು ನಸುನಕ್ಕು, ‘ಸಂಸಾರದ ಸಮಸ್ಯೆಯನ್ನು ಸೌಹಾರ್ದದಿಂದ ಬಗೆಹರಿಸಿಕೋ’ ಎಂದು ಬುದ್ಧಿ ಹೇಳಿದರು.

‘ಕೊಲ್ಲುವ ಭಯವಿದ್ದರೆ ಠಾಣೆಯಲ್ಲೇ ಹೋಗಿ ಮಲಗು’ ಎಂಬ ಪುಕ್ಕಟೆ ಸಲಹೆಯೊಂದು ಅಕ್ಕಪಕ್ಕದಲ್ಲಿದ್ದ ಪೊಲೀಸರ ನಡುವಿನ ಚರ್ಚೆಯಲ್ಲಿ ತೇಲಿ ಬಂದು ನಗೆ ಸೃಷ್ಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT