ಬುಧವಾರ, ಮೇ 12, 2021
27 °C

ಮಂಗಳವಾರ, 4–6–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏ.ಐ.ಸಿ.ಸಿ. ಅಧಿವೇಶನ: ನಾಯಕತ್ವದ ನಿರಾತಂಕ ಧೋರಣೆಗೆ ಉಗ್ರ ಟೀಕೆ

ನವದೆಹಲಿ, ಜೂನ್ 3– ಇತ್ತೀಚಿನ ಚುನಾವಣಾ ವಿಜಯದಿಂದ ಉಂಟಾದ ಸಂತೃಪ್ತ ಮನೋಭಾವವನ್ನು ಕಾಂಗ್ರೆಸ್ ಪಕ್ಷ ಬಿಡಬೇಕಾದ್ದು ಅಗತ್ಯ.

ಏ.ಐ.ಸಿ.ಸಿ. ಅಧಿವೇಶನದ ಎರಡನೇ ದಿನವಾದ ಇಂದು ರಾಷ್ಟ್ರದ ರಾಜಕೀಯ ಪರಿಸ್ಥಿತಿ ಕುರಿತ ಶ್ರೀ ಎಸ್.ಎನ್. ಮಿಶ್ರ ಅವರ ನಿರ್ಣಯದ ಮೇಲೆ ಎಂಟು ಗಂಟೆ ನಡೆದ ಚರ್ಚೆಯಲ್ಲಿ ಈ ಅಗತ್ಯವನ್ನು ಎಲ್ಲರೂ ಒತ್ತಿ ಹೇಳಿದರು.

ಯೋಜನಾ ಚಿತ್ರ 

ನವದೆಹಲಿ, ಜೂ. 3– ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ಹಾಗೂ ಕೇಂದ್ರ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಏ.ಐ.ಸಿ.ಸಿ. ಅಧಿವೇಶನದಲ್ಲಿ ಮಾತನಾಡುತ್ತಾ ಭಾರತದ ಯೋಜನಾ ಪ್ರಗತಿಯ ಚಿತ್ರವನ್ನು ಕೊಟ್ಟರು.

‘ಮೊದಲನೆಯ ಯೋಜನೆ ಯಶಸ್ವಿಯಾಯಿತು. ಎರಡನೆ ಯೋಜನೆ ಸಾಧಾರಣ ಯಶಸ್ಸು ಪಡೆಯಿತು. ಮೂರನೆಯ ಯೋಜನೆ ವಿಫಲವಾಯಿತು. ಕಳೆದ ಮೂರು ವರ್ಷಗಳು ಈ ಯೋಜನೆಗೆ ಪೂರ್ಣ ರಜೆ’‌

ನಾಲ್ಕನೆ ಯೋಜನೆ ಸಮೀಪಿಸುತ್ತಿರುವಂತೆ, 1975ರ ಹೊತ್ತಿಗೆ ಜನತೆಗೆ ಕನಿಷ್ಠ ಜೀವನ ಮಟ್ಟವನ್ನು ಒದಗಿಸುವ ಗುರಿಯನ್ನು ತಲುಪುವುದೂ ಅಸಾಧ್ಯವಾಗುತ್ತಿದೆ ಎಂದರು.

ಜತ್ತಿ ಬಗ್ಗೆ ಕನಿಕರ

ನವದೆಹಲಿ, ಜೂನ್‌ 3– ಮೈಸೂರಿನ ಹೊಸ ಸಂಪುಟದಿಂದ ಕಳಚಿಬಿದ್ದ ಮಾಜಿ ಸಚಿವ ಬಿ.ಡಿ. ಜತ್ತಿ ಅವರ ಬಗ್ಗೆ ಇಂದು ಮಾವಳಂಕರ್ ಭವನದಲ್ಲಿ ಸಹಾನುಭೂತಿ ಮತ್ತು ಟೀಕೆಗಳೆರಡೂ ಒಟ್ಟೊಟ್ಟಿಗೆ ವ್ಯಕ್ತಪಟ್ಟವು.

ಹೊಸ ಸಂಪುಟದಲ್ಲೇಕೆ ನಿಮಗೆ ಸ್ಥಾನ ಸಿಗಲಿಲ್ಲವೆಂದು ಗೃಹಸಚಿವ ಚವಾಣರು ಶ್ರೀ ಜತ್ತಿಯವರನ್ನೇ ಕೇಳಿದರೆಂದು ನಂಬಲಾಗಿದೆ. ಅವರು (ಜತ್ತಿ) ದೆಹಲಿಗೆ ಬರುವುದು ಏನಾಯಿತೆಂದೂ ಚವಾಣ್ ಕೇಳಿದರೆನ್ನಲಾಗಿದೆ.

ಸಚಿವಾಲಯ

ಬೆಂಗಳೂರು, ಜೂ. 3– ವಿಧಾನಸೌಧದ ಕೊನೆಯ ಅಂತಸ್ತು ಮೈಸೂರಿನ ‘ಸಚಿವಾಲಯ’ ಆಗಲಿದೆ.

ಮಹಾರಾಷ್ಟ್ರ ಸಚಿವಾಲಯದ ಮಾದರಿಯಲ್ಲಿ ರಾಜ್ಯದ ನೂತನ ಸಂಪುಟದ ಎಲ್ಲ ಸಚಿವರು, ಸ್ಟೇಟ್ ಸಚಿವರು ಹಾಗೂ ಉಪ ಸಚಿವರುಗಳಿಗೆ ವಿಧಾನಸೌಧದ ಮೂರನೆಯ ಅಂತಸ್ತಿನಲ್ಲಿ ಕೊಠಡಿಗಳ ವ್ಯವಸ್ಥೆಯಾಗಲಿದೆ.

ಹೆಲನ್ ಕೆಲರ್ ನಿಧನಕ್ಕೆ ಸಂ‍ತಾಪ 

ನವದೆಹಲಿ, ಜೂನ್‌ 3– ಶನಿವಾರ ರಾತ್ರಿ ಡಾ. ಹೆಲನ್ ಕಲರ್ ಅವರು ನಿಧನರಾದುದಕ್ಕೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.