ರಾಮ್‌‍ದೇವ್ ಭೇಟಿ ಮಾಡಿದ ಅಮಿತ್ ಶಾ; 2019 ಚುನಾವಣೆಗೆ ಬೆಂಬಲ ಕೋರಿಕೆ

7

ರಾಮ್‌‍ದೇವ್ ಭೇಟಿ ಮಾಡಿದ ಅಮಿತ್ ಶಾ; 2019 ಚುನಾವಣೆಗೆ ಬೆಂಬಲ ಕೋರಿಕೆ

Published:
Updated:
ರಾಮ್‌‍ದೇವ್ ಭೇಟಿ ಮಾಡಿದ ಅಮಿತ್ ಶಾ; 2019 ಚುನಾವಣೆಗೆ ಬೆಂಬಲ ಕೋರಿಕೆ

ನವದೆಹಲಿ: ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದ ಅಂಗವಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೋಮವಾರ ಯೋಗ ಗುರು ಬಾಬಾ ರಾಮ್‍ದೇವ್ ಅವರನ್ನು ಭೇಟಿ ಮಾಡಿ 2019ರ ಚುನಾವಣೆಗೆ ಬೆಂಬಲ ಕೋರಿದ್ದಾರೆ.

ಅವರ ಬೆಂಬಲ ಕೋರಲು ನಾನಿಲ್ಲಿಗೆ ಬಂದಿದ್ದೇನೆ. ನಮ್ಮ ಕೆಲಸದ ಬಗ್ಗೆ ನಾನು ಅವರಿಗೆ ಸವಿವರವಾಗಿ ವಿವರಿಸಿದ್ದೇನೆ. ಅವರು ಸಮಾಧಾನದಿಂದ ಎಲ್ಲವನ್ನೂ ಆಲಿಸಿದ್ದಾರೆ.ಬಾಬಾ ರಾಮ್‍ದೇವ್ ಅವರ ಸಹಾಯ ಸಿಕ್ಕಿದರೆ ಅವರ ಕೋಟಿಗಟ್ಟಲೆ ಬೆಂಬಲಿಗರನ್ನು ನಾವು ತಲುಪಬಹುದು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾ ಹೇಳಿದ್ದಾರೆ.

ಸಂಪರ್ಕ್ ಫಾರ್ ಸಮರ್ಥನ್ ಎಂಬ ಅಭಿಯಾನದ ಮೂಲಕ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ 50 ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ, ಅವರ ಬೆಂಬಲ ಕೋರಲಾಗುತ್ತದೆ. 2014ರಲ್ಲಿ ನಮ್ಮೊಂದಿಗೆ ಇದ್ದವರ ಆಶೀರ್ವಾದವನ್ನು ನಾವು ಪಡೆಯುತ್ತೇವೆ. ನಾವು ಕನಿಷ್ಠ ಒಂದು ಲಕ್ಷ ಜನರನ್ನು ಸಂಪರ್ಕಿಸಿ ಒಂದು ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಿದ್ದೇವೆ ಎಂದಿದ್ದಾರೆ ಅಮಿತ್ ಶಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry