ಬಟ್ಲರ್ ಬ್ಯಾಟ್ ಮೇಲೆ ಅವಾಚ್ಯ ಪದ

7

ಬಟ್ಲರ್ ಬ್ಯಾಟ್ ಮೇಲೆ ಅವಾಚ್ಯ ಪದ

Published:
Updated:
ಬಟ್ಲರ್ ಬ್ಯಾಟ್ ಮೇಲೆ ಅವಾಚ್ಯ ಪದ

ಬೆಂಗಳೂರು: ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರ ಬ್ಯಾಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಅವರು ತಮ್ಮ ಬ್ಯಾಟ್‌ನ ಹಿಡಿಕೆಯ ಮೇಲ್ಭಾಗದಲ್ಲಿ ಬರೆದಿರುವ ಅವಾಚ್ಯ ಪದ ಅದಕ್ಕೆ ಕಾರಣ. ಪಾಕಿಸ್ತಾನ ತಂಡದ ಎದುರಿನ ಟೆಸ್ಟ್‌ನಲ್ಲಿ ಅವರು ಈ ಬ್ಯಾಟ್‌ನಲ್ಲಿ ಆಡಿದ್ದರು. ವಿರಾಮದ ವೇಳೆ ಅವರು ಹೆಲ್ಮೆಟ್‌ ಮತ್ತು ಬ್ಯಾಟ್ ಅನ್ನು ಬಿಸಿಲಿನಲ್ಲಿ ಇಟ್ಟು ಪೆವಿಲಿಯನ್‌ಗೆ ಹೋಗಿದ್ದರು. ಆಗ ಪ್ರೇಕ್ಷಕರೊಬ್ಬರು ತೆಗೆದ ಚಿತ್ರದಲ್ಲಿ ಈ ಅಂಶ ಗಮನಕ್ಕೆ ಬಂದಿದೆ. ಪಿಯರ್ಸ್ ಮಾರ್ಗನ್ ಎಂಬುವವರು ಈ ಚಿತ್ರವನ್ನು ಟ್ವೀಟ್ ಮಾಡಿ ಬಟ್ಲರ್‌ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇನ್ನೂ ಕೆಲವರು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry