ಅಂಡರ್‌ಪಾಸ್‌ ಕಾಮಗಾರಿ ಆರಂಭ

7
ಹೊಸಕೆರೆಹಳ್ಳಿ ಕ್ರಾಸ್‌: ಎರಡು ವರ್ಷದ ಬಳಿಕ ಮರುಜೀವ ಪಡೆದ ಯೋಜನೆ

ಅಂಡರ್‌ಪಾಸ್‌ ಕಾಮಗಾರಿ ಆರಂಭ

Published:
Updated:
ಅಂಡರ್‌ಪಾಸ್‌ ಕಾಮಗಾರಿ ಆರಂಭ

ಬೆಂಗಳೂರು: ಹೊಸಕೆರೆಹಳ್ಳಿ ಕ್ರಾಸ್‌ ಬಳಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಬಿಬಿಎಂಪಿ ಕೊನೆಗೂ ಚಾಲನೆ ನೀಡಿದೆ. ಎರಡು ವರ್ಷಗಳಿಂದ ನನೆಗುದಿಗೆ ಬಿದ್ದ ಕಾಮಗಾರಿಗೆ ಈಗ ಮರುಜೀವ ಸಿಕ್ಕಿದೆ.

ಆದರೂ ಭೂಸ್ವಾಧೀನ ಸಂಬಂಧಿಸಿ ಸುತ್ತಮುತ್ತಲಿನ ಭೂ ಮಾಲೀಕರ ನಡುವಿನ ಗೊಂದಲ ಬಗೆಹರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.

‘ಈ ಯೋಜನೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಮೊದಲು ತೀರಾ ನಿರ್ಲಕ್ಷ್ಯ ವಹಿಸಿ ಆಸ್ತಿ, ಕಟ್ಟಡಗಳನ್ನು ಗುರುತು ಮಾಡಲಾಯಿತು. ಕೊನೆಗೆ ಯಾವುದೇ ಕಟ್ಟಡ

ಗಳನ್ನು ತೆರವು ಮಾಡುವುದಿಲ್ಲ ಎಂದು ಬಿಬಿಎಂಪಿ ಭರವಸೆ ನೀಡಿತು. ಕಳೆದ ನವೆಂಬರ್‌ನಲ್ಲಿ ಪರಿಹಾರ ನೀಡುವ ಸಂಬಂಧ ಚರ್ಚಿಸಲು ಸಭೆ ಕರೆಯಿತು. ಅಲ್ಲಿ ಯಾವುದೇ ನಿರ್ಧಾರ ಆಗಲಿಲ್ಲ. ಈಗ ಏಕಾಏಕಿಯಾಗಿ ಹಗಲು ರಾತ್ರಿ ಕೆಲಸ ನಡೆಯುತ್ತಿದೆ’ ಎಂದು ಈ ಪ್ರದೇಶದ ಸಂತ್ರಸ್ತರೊಬ್ಬರು ಹೇಳಿದರು.

2017ರ ಆಗಸ್ಟ್‌ನಲ್ಲಿ ಅಂದು ಬಿಬಿಎಂಪಿಯ ಪ್ರಮುಖ ರಸ್ತೆಗಳು ಮತ್ತು ಮೂಲಸೌಲಭ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಅವರು ‘ಈ ಕಾಮಗಾರಿ ನಡೆಸಲು ಯಾವುದೇ ಆಸ್ತಿಗಳನ್ನು ತೆರವು ಮಾಡಬೇಕಿಲ್ಲ. ಇಲ್ಲಿ ಸಾಕಷ್ಟು ಅವಕಾಶವಿದೆ’ ಎಂದಿದ್ದರು. ಕಳೆದ ನವೆಂಬರ್‌ನಲ್ಲಿ ಬಂದ ಅಧೀಕ್ಷಕ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಅವರು ಇಲ್ಲಿ ಕೆಲವು ಆಸ್ತಿ ಸ್ವಾಧೀನ ಮಾಡಿಕೊಳ್ಳುವುದು ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ನಾಗರಾಜ್‌ ಅವರು ಹೇಳುವಂತೆ, ‘ಈ ಯೋಜನೆಯ ಕಾಮಗಾರಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆಸ್ತಿ ಸ್ವಾಧೀನ ಅಗತ್ಯಬಿದ್ದರೆ ಮಾತ್ರ ಮಾಡಬೇಕಾಗಬಹುದು. ಸ್ವಾಧೀನ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಿದರೆ ಅದು ಬಹಳ ಕಾಲ ತೆಗೆದುಕೊಳ್ಳಲಿದೆ. ಇಂಥ ತುರ್ತು ಸಂದರ್ಭಗಳಲ್ಲಿ ಭೂಮಾಲೀಕರ ಜತೆ ಚರ್ಚಿಸಿ ಮಾರ್ಗ

ದರ್ಶಿ ಸೂತ್ರಗಳ ಪ್ರಕಾರ ಮೌಲ್ಯ ನಿಗದಿಪಡಿಸಲು ಬಿಬಿಎಂಪಿ ಆಯುಕ್ತರಿಗೆ ಅಧಿಕಾರವಿದೆ’ ಎಂದು ಹೇಳಿದರು.

‘ಕಾಮಗಾರಿ ಆರಂಭವಾದಂದಿನಿಂದ ವಾಹನಗಳು ರಿಂಗ್‌ರೋಡ್‌ ಮೂಲಕ ಹಾದು ಹೋಗಬೇಕಿದೆ. ಕೆಲವೊಮ್ಮೆ ಪರ್ಯಾಯ ಮಾರ್ಗಗಳನ್ನು ಬಳಸಿ ಸಾಗುತ್ತಿವೆ. ಸಂಚಾರ ದಟ್ಟಣೆ ವಿಪರೀತವೆನಿಸಿದೆ. ಕಾಲಮಿತಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ನಿವಾಸಿಗಳು ಎಚ್ಚರಿಸಿದರು.

'ಈ ಬಾರಿ ಚುನಾವಣಾ ಸಂದರ್ಭ ಜನಾಕ್ರೋಶ ಎದುರಾಗುವ ಆತಂಕದಲ್ಲಿ ಯಾವುದೇ ಅಭ್ಯರ್ಥಿಗಳು ಈ ಪ್ರದೇಶದಲ್ಲಿ ಪ್ರಚಾರ ನಡೆಸಿರಲಿಲ್ಲ. ಇಲ್ಲಿ ದೊಡ್ಡ ಅಪಘಾತ ನಡೆಯುವವರೆಗೆ ಅಧಿಕಾರಿಗಳು ಈ ಕಾಮಗಾರಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ' ಎಂದು ಸ್ಥಳೀಯ ನಿವಾಸಿ ಬ್ರಿಜೇಶ್‌ ಹೇಳಿದರು.

**

ಯೋಜನೆಯ ಕಾಮಗಾರಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಅಗತ್ಯಬಿದ್ದರೆ ಮಾತ್ರ ಆಸ್ತಿ ಸ್ವಾಧೀನ ಮಾಡಬೇಕಾಗಬಹುದು.

 - ಕೆ.ಟಿ.ನಾಗರಾಜ್‌, ಅಧೀಕ್ಷಕ ಎಂಜಿನಿಯರ್‌ ಬಿಬಿಎಂಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry