ಪರಮೇಶ್ವರ್ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಲಿಂಗಪ್ಪ ವಾಗ್ದಾಳಿ

7

ಪರಮೇಶ್ವರ್ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಲಿಂಗಪ್ಪ ವಾಗ್ದಾಳಿ

Published:
Updated:
ಪರಮೇಶ್ವರ್ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಲಿಂಗಪ್ಪ ವಾಗ್ದಾಳಿ

ರಾಮನಗರ: ಕೆಪಿಸಿಸಿ ಅಧ್ಯಕ್ಷ ಜಿ .ಪರಮೇಶ್ವರ್ ಕಾಂಗ್ರೆಸ್‌ಅನ್ನು ಅಧೋಗತಿಗೆ ತರುತ್ತಿದ್ದು, ನಮ್ಮ ಹೆಂಡತಿ ಮಕ್ಕಳನ್ನೂ ಮಾರಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಕಿಡಿಕಾರಿದರು.

ಅವರಿಗೆ ಉಪಮುಖ್ಯಮಂತ್ರಿ ಆಗಿದ್ದೇ ಹೆಚ್ಚು ಎಂಬಂತೆ ಆಗಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿ ಆಗಬೇಕು‌ ಎಂಬ ಗುರಿ ಇಲ್ಲ. ರಾಮನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಮಾರಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್‌ಗೆ ಮಂತ್ರಿ ಸ್ಥಾನ ಕೊಡಬೇಡಿ ಎಂದು ಹೇಳುವಷ್ಟು ಧೈರ್ಯ ಯಾವ ರಾಜಕಾರಣಿಗೂ ಇಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ಪಕ್ಷದೊಳಗೇ ಸಂಚು ನಡೆದಿರುವುದು ನಿಜ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry