ಅರಣ್ಯ ರಕ್ಷಣೆಗೆ ರಾನಾ ಕಂಕಣ

7

ಅರಣ್ಯ ರಕ್ಷಣೆಗೆ ರಾನಾ ಕಂಕಣ

Published:
Updated:
ಅರಣ್ಯ ರಕ್ಷಣೆಗೆ ರಾನಾ ಕಂಕಣ

ಬಾಹುಬಲಿ ಖ್ಯಾತಿಯ ನಟ ರಾನಾ ದಗ್ಗುಬಾಟಿಯವರು ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಪ್ರಸ್ತುತ ಅವರು ಬಾಲಿವುಡ್‌ನ ‘ಹಾಥಿ ಮೇರಿ ಸಾಥಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಭು ಸಲ್ಮಾನ್ ನಿರ್ದೇಶನದ ಈ ಚಿತ್ರವು ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ನಿರ್ಮಾಣವಾಗುತ್ತಿದೆ.

ಈಚೆಗಷ್ಟೇ ತೆಲುಗು ಮತ್ತು ತಮಿಳು ಅವತರಣಿಕೆಯ ಶೀರ್ಷಿಕೆಗಳನ್ನು ಚಿತ್ರತಂಡ ಪ್ರಕಟಿಸಿದೆ. ತೆಲುಗಿನಲ್ಲಿ ಅರಣ್ಯ, ತಮಿಳಿನಲ್ಲಿ ಕಾಡನ್‌ ಎಂಬ ಶೀರ್ಷಿಕೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳಬೇಕಾಯಿತು ಎಂದು ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ರಾನಾ ಹೆಗಲ ಮೇಲೆ ಆನೆ ಸೊಂಡಿಲು ಇಟ್ಟಿರುವುದು ಸಿನಿಪ್ರಿಯರ ಗಮನ ಸೆಳೆದಿದೆ. ವನ್ಯಪ್ರಾಣಿಗಳ ಸಂರಕ್ಷಣೆ ಕುರಿತು ಚಿತ್ರ ತಯಾರಾಗಿದ್ದು, ಆನೆ ಕೂಡ ಪ್ರಮುಖ ಪಾತ್ರ ಪೋಷಿಸಿದೆ ಎಂದು ಚಿತ್ರತಂಡ ಹೇಳಿದೆ.

ಚಿತ್ರಕ್ಕಾಗಿ ರಾನಾ ಅವರು 15 ದಿನ 18 ಆನೆಗಳೊಂದಿಗೆ ಸಮಯ ಕಳೆದಿದ್ದಾರೆ. ಅವುಗಳ ಸ್ನೇಹ ಗಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ ಎಂದು ಚಿತ್ರ ತಂಡ ಹೇಳಿದೆ. ಚಿತ್ರದ ಬಹುತೇಕ ದೃಶ್ಯಗಳನ್ನು ಥಾಯ್ಲೆಂಡ್‌ನಲ್ಲೇ ಚಿತ್ರೀಕರಿಸಲಾಗಿದೆ.

‘ಅರಣ್ಯ ಚಿತ್ರಕ್ಕಾಗಿ 20 ದಿನ ಕಾಡಿನಲ್ಲೇ ವಾಸ್ತವ್ಯ ಹೂಡಬೇಕಾಯಿತು. ಎರಡು ವಾಸ್ತವ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಿಸಲಾಗುತ್ತಿದೆ. ಹಲವು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದೆ. ಶ್ರಮವಹಿಸಿ ಶೂಟಿಂಗ್ ಮುಗಿಸಲಾಗಿದೆ’ ಎಂದು ರಾನಾ ಅವರು ಈಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry