ತಡವಾಗಿ ಬಂದವರ ರಜೆ ಕಡಿತ

7

ತಡವಾಗಿ ಬಂದವರ ರಜೆ ಕಡಿತ

Published:
Updated:

ಬೆಂಗಳೂರು: ಸಚಿವಾಲಯದ ಕಚೇರಿಗಳಿಗೆ ತಡವಾಗಿ ಬಂದು ಬೇಗನೇ ಹೋಗುವ ಅಧಿಕಾರಿಗಳು ಮತ್ತು ನೌಕರರ ರಜೆ ಕಡಿತಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿ ಮುಂದಾಗಿದ್ದಾರೆ.

ಪ್ರಸಕ್ತ ವರ್ಷ ಜನವರಿಯಿಂದ ಏಪ್ರಿಲ್‌ವರೆಗಿನ ಹಾಜರಾತಿ ವಿವರ ತರಿಸಿ ಪರಿಶೀಲಿಸಲಾಗುವುದು. ಈ ಅವಧಿಯಲ್ಲಿ ತಡವಾಗಿ ಬಂದು, ಬೇಗನೇ ಹೋದ ಅಧಿಕಾರಿಗಳು ಮತ್ತು ನೌಕರರ ಸಾಂದರ್ಭಿಕ ರಜೆ, ಗಳಿಕೆ ರಜೆಯನ್ನು ನಿಯಮಾನುಸಾರ ಕಡಿತ ಮಾಡಲಾಗುವುದು.

ಜೂನ್‌ 30ರ ಒಳಗೆ ವರದಿಯನ್ನು ಆಯಾ ಸಚಿವಾಲಯದ ಮೇಲಧಿಕಾರಿಗಳು ಸಲ್ಲಿಸಬೇಕು. ಮುಂದೆ ಪ್ರತಿ ತಿಂಗಳ 15ನೇ ತಾರೀಖಿನ ಒಳಗೆ ಎಲ್ಲರ ಹಾಜರಾತಿ ಪರಿಶೀಲಿಸಿ, ವಿಳಂಬವಾಗಿದ್ದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಸುಧಾರಣೆ) ಕೆ.ರವೀಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ ವಿಳಂಬ ಹಾಜರಾತಿ ಬಗ್ಗೆ ಜಗದೀಶ್‌ ರೆಡ್ಡಿ ಮತ್ತು ನಟರಾಜ್‌ ಎಂಬುವವರು ರವೀಂದ್ರ ಅವರಿಗೆ ಮನವಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry