ಸೋಮವಾರ, ಡಿಸೆಂಬರ್ 9, 2019
24 °C

ಮಾನವೀಯತೆ ಮೆರೆದ ನ್ಯಾಯಾಧೀಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಅಲೆದಾಡುತ್ತಿದ್ದ ಮೂವರು ವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ.

ಸ್ವಯಂ ಸೇವಕರಾದ ಶ್ರುತಿ, ಅಶೋಕಕುಮಾರ ಮತ್ತು ದೀಪಾ ಕ್ರಾಂತಿವೀರ ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ವಾರ್ಡ್ 3ರಲ್ಲಿ ಮೂವರು ವೃದ್ಧರು ಅನಾಥ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತು. ಅವರನ್ನು ವಿಚಾರಿಸಿದಾಗ ಅವರು ಕೊಟ್ಟ ವಿಳಾಸ ಅಸ್ತಿತ್ವದಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿತು. ನ್ಯಾಯಾಧೀಶರು ಅಧಿಕಾರಿಗಳನ್ನು ಕರೆಸಿ ಮಾಹಿತಿ ನೀಡಿದರು. ನಂತರ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದ ಮದರ್ ತೆರೆಸಾ ವೃದ್ಧಾಶ್ರಮಕ್ಕೆ ಕಳಿಸಿಕೊಡಲಾಯಿತು.

ಹೈನುಗಾರಿಕೆ ತರಬೇತಿ

ಬೀದರ್‌:
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ಜೂನ್‌ 8 ರಿಂದ 25ರ ವರೆಗೆ ನಗರದ ಜನವಾಡ ರಸ್ತೆಯಲ್ಲಿ ಇರುವ ರೈತರ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಹೈನುಗಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಆಯೋಜಿಸಲಾಗಿದೆ.

ಆಸಕ್ತರು ಆಧಾರ್ ಕಾರ್ಡ್‌ನ ನಕಲು ಪ್ರತಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು ಎಂದು ಕೇಂದ್ರದ ಪಶು ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)