ವಿಪರ್ಯಾಸದ ನಡೆ

6

ವಿಪರ್ಯಾಸದ ನಡೆ

Published:
Updated:

ವಿಶ್ವ ಪರಿಸರ ದಿನದಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ ಸರ್ಕಾರ, ಪರಿಸರ ಮಾರಕ ಪ್ಲಾಸ್ಟಿಕ್ ಬಳಸದಿರಿ, ಪ್ಲಾಸ್ಟಿಕ್ ಬಾಟಲ್‌ ಬಳಕೆ ತ್ಯಜಿಸಿ ಎಂದೆಲ್ಲ ಕರೆ ಕೊಟ್ಟಿತು. ಆದರೆ ಮುಖ್ಯಮಂತ್ರಿಯೇ ಅದನ್ನು ಅನುಸರಿಸಲು ವಿಫಲರಾದರು.

ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾಗಲು ಬಂದಿದ್ದ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ನೇತೃತ್ವದ ತಂಡದವರೂಡನೆ ಮುಖ್ಯಮಂತ್ರಿ ಸಭೆ ನಡೆಸುವಾಗ ಮೇಜಿನ ಪ್ರತಿಯೊಬ್ಬರ ಮುಂದೆಯೂ ನೀರಿನ ಬಾಟಲ್‌ಗಳು ರಾಜಾಜಿಸುತ್ತಿದ್ದವು. ಜೊತೆಗೆ ಬೇಸರವೂ ಆಯಿತು. ಸರ್ಕಾರದಲ್ಲೂ ಬಾಟಲಿ ನೀರಿಗೆ ಪರ್ಯಾಯ ಇಲ್ಲವಾಯಿತೇ? ಬಾಟಲಿ ನೀರಿನ ಸಂಸ್ಕೃತಿ ತಡೆಗಟ್ಟಲು ಗಂಭೀರ ಪ್ರಯತ್ನಗಳಾಗಬೇಕು.

– ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry