ಸೋಮವಾರ, ಡಿಸೆಂಬರ್ 9, 2019
22 °C

ಒಲಿಂಪಿಯಾಡ್‌: ಬೆಂಗಳೂರು ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಅಗ್ರ ರ‍್ಯಾಂಕಿಂಗ್‌ ಪಡೆದಿದ್ದಾರೆ.

ಸಿಎಂಆರ್‌ ನ್ಯಾಷನಲ್ ಪಬ್ಲಿಕ್‌ ಶಾಲೆಯ ವಂಶಿ ಕೃಷ್ಣನ್‌ ರಾಜಗೋಪಾಲ್ (4ನೇ ತರಗತಿ), ಗಿಯರ್ ಇನೊವೆಟಿವ್ ಅಂತರರಾಷ್ಟ್ರೀಯ ಶಾಲೆಯ ರಿಷಿ ಆನಂದ ನಂಬಿಯಾರ್ (8ನೇ ತರಗತಿ) ಮೊದಲ ರ್‍ಯಾಂಕ್‌ ಗಳಿಸಿದ್ದಾರೆ.

ಇವರಿಗೆ 50 ಸಾವಿರ ನಗದು ಹಾಗೂ ಸ್ವರ್ಣ ಪದಕವನ್ನು ಬಹುಮಾನವಾಗಿ ನೀಡಲಾಯಿತು. ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ (ಎಸ್‍ಒಎಫ್) ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ 30 ರಾಷ್ಟ್ರಗಳ 1,400 ನಗರಗಳ ಒಟ್ಟು 45 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 4,85,426 ವಿದ್ಯಾರ್ಥಿಗಳು ನಗರದವರು.

ವಂಶಿ ಕೃಷ್ಣನ್‌ ಇಂಗ್ಲಿಷ್ ಒಲಿಂಪಿಯಾಡ್ ಸ್ಪರ್ಧೆಯಲ್ಲೂ ಮೊದಲ ರ‍್ಯಾಂಕ್‌ ಗಳಿಸಿದ್ದ. ಜೊತೆಗೆ ಅಂತರರಾಷ್ಟ್ರೀಯ ಜನರಲ್ ನಾಲೆಡ್ಜ್‌ ಸ್ಪರ್ಧೆಯಲ್ಲಿ 29ನೇ ಸ್ಥಾನ ಪಡೆದಿದ್ದ. ಆ ಸ್ಪರ್ಧೆಯ ವಿಭಾಗೀಯ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ.

ಟಿಸಿಎಸ್‌ ಸಾಥ್‌: ಮುಂದಿನ ಶೈಕ್ಷಣಿಕ ವರ್ಷದಿಂದ ಪರೀಕ್ಷೆಗೆ ಡಿಜಿಟಲ್‌ ಸ್ಪರ್ಶ ದೊರೆಯಲಿದೆ. ಎಸ್‌ಒಎಫ್‌ ಅಂತರರಾಷ್ಟ್ರೀಯ ಜನರಲ್‌ ನಾಲೆಡ್ಜ್‌ ಒಲಿಂಪಿಯಾಡ್‌ ಸಹ ಪರಿಚಯವಾಗಲಿದ್ದು, ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ದೊರೆಯಲಿದೆ ಎಂದು ಎಸ್‌ಒಎಫ್‌ನ ಸಂಸ್ಥಾಪಕ ಮಹಾಬೀರ್‌ ಸಿಂಗ್‌ ಮಾಹಿತಿ ನೀಡಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಪರೀಕ್ಷೆ ನಡೆಸಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಸಹ ನಮ್ಮ ಜೊತೆ ಕೈಜೋಡಿಸುತ್ತಿದೆ ಎಂದು ಎಸ್‌ಒಎಫ್‌ನ ಸಂಸ್ಥಾಪಕ ಮಹಾಬೀರ್‌ ಸಿಂಗ್‌ ಹೇಳಿದರು

ಪ್ರತಿಕ್ರಿಯಿಸಿ (+)