ಗುರುವಾರ , ಜುಲೈ 7, 2022
20 °C

ಮತ್ತೊಂದು ಹಾಲಿವುಡ್‌ ಚಿತ್ರದಲ್ಲಿ ದೀಪಿಕಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಸ್ಟಾರ್ ನಟಿ, ದೀಪಿಕಾ ಪಡುಕೋಣೆ ಮತ್ತೊಂದು ಹಾಲಿವುಡ್‌ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. 2017ರಲ್ಲಿ ವಿನ್‌ ಡಿಜೆಲ್ ನಾಯಕ ನಟನಾಗಿ ತೆರೆಕಂಡ ಹಾಲಿವುಡ್‌ನ ‘XXX–ರಿಟರ್ನ್‌ ಆಫ್‌ ಜಾಂಡರ್ ಕೇಜ್‌’ ಚಿತ್ರದಲ್ಲಿ ನಟಿಸಿದ್ದ ಈ ಬೆಂಗಳೂರು ಬೆಡಗಿ, XXX ಸರಣಿಯ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ವಿಷಯವನ್ನು ಚಿತ್ರದ ನಿರ್ದೇಶಕ ಡಿಜೆ ಕರುಸೊ ಅವರು ದೃಢಪಡಿಸುತ್ತಾ ಟ್ವಿಟ್‌ ಮಾಡಿದ್ದರು. ಈಚೆಗಷ್ಟೇ ಅವರು ಚಿತ್ರದ ಮತ್ತೊಂದು ಆಸಕ್ತಿಕರ ವಿಷಯದ ಬಗ್ಗೆ ಟ್ವೀಟ್‌ ಮಾಡಿದ್ದು, ಚಿತ್ರದ ಕೊನೆಯಲ್ಲಿ ಬಾಲಿವುಡ್‌ನ ಜನಪ್ರಿಯ ‘ಲುಂಗಿ ಡಾನ್ಸ್‌’ ಹಾಡು ಕೂಡ ಇರಲಿದೆ ಎಂದು ತಿಳಿಸಿದ್ದಾರೆ.

XXX–ರಿಟರ್ನ್‌ ಆಫ್‌ ಜಾಂಡರ್ ಕೇಜ್‌ ಚಿತ್ರದ ಪ್ರಮೋಷನ್‌ನಾಗಿ ಭಾರತಕ್ಕೆ ಬಂದಿದ್ದ ವಿನ್‌ ಡಿಜೆಲ್‌ ದೀಪಿಕಾ ಜತೆ ಲುಂಗಿ ಉಟ್ಟು ಕುಣಿದಿದ್ದರು. ಈ ಚಿತ್ರದಲ್ಲಿ ದೀಪಿಕಾ ಅವರು  ಆ್ಯಕ್ಷನ್ ದೃಶ್ಯಗಳಲ್ಲಿ ಉತ್ತಮವಾಗಿ ನಟಿಸಿದ್ದರು. ಈ ಚಿತ್ರಕ್ಕಾಗಿ ಹಲವು ಬಾಲಿವುಡ್‌ ಚಿತ್ರಗಳನ್ನು ದೀಪಿಕಾ ಕೈಚೆಲ್ಲಿದ್ದರು.

ಪದ್ಮಾವತ್ ಚಿತ್ರದ ನಂತರ, ಅವರು ಬೇರೆ ಚಿತ್ರಕ್ಕಾಗಿ ಸಹಿ ಹಾಕಿಲ್ಲ. ಸದ್ಯದಲ್ಲೇ ಅವರು ಮದುವೆಯಾಗಲಿದ್ದಾರೆ, ಹೀಗಾಗಿಯೇ ಬಂದ ಅವಕಾಶಗಳನ್ನು ಬಿಡುತ್ತಿದ್ದಾರೆ ಎಂಬ ಮಾತುಗಳು ಬಿಟೌನ್‌ನಲ್ಲಿ ಕೇಳಿಬಂದವು. ಈಗ ಹಾಲಿವುಡ್ ಚಿತ್ರದ ವಿಷಯ ಬಹಿರಂಗವಾಗುತ್ತಿದ್ದಂತೇ, ಈ ಚಿತ್ರಕ್ಕಾಗಿ ದೀಪಿಕಾ ಅವಕಾಶಗಳನ್ನು ದೂರ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.