ಹುಂಡಿ ಕಳ್ಳನ ಬಂಧನ

7

ಹುಂಡಿ ಕಳ್ಳನ ಬಂಧನ

Published:
Updated:

ಬೆಂಗಳೂರು: ದೇವಸ್ಥಾನದ ಹುಂಡಿ ಮತ್ತು ಹಿತ್ತಾಳೆಯ ದೀಪಾಲೆ ಕಂಬಗಳನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿಯ ಮಹಮ್ಮದ್‌ ಮುದಾಸಿರ್‌ ವಿರುದ್ಧ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದಾನೆ.

ಇದೇ 4ರಂದು ಬೊಮ್ಮನಹಳ್ಳಿ ಜಂಕ್ಷನ್‌ ಹತ್ತಿರ ಸರ್ವಿಸ್‌ ರಸ್ತೆಯಲ್ಲಿ, ನಾಗೇಶ್ವರಿ ದೇವಸ್ಥಾನದ ಬಳಿ ಹುಂಡಿ ಮತ್ತು ದೀಪಾಲೆ ಕಂಬಗಳನ್ನು ಹಿಡಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry