ಕಣ್ಣೀರಲ್ಲ, ಆನಂದ ಭಾಷ್ಪ

7
ಅಭಿನಂದನಾ ಸಮಾರಂಭದಲ್ಲಿ ಭಾವುಕರಾದ ಸಚಿವ ಎಂ.ಸಿ. ಮನಗೂಳಿ

ಕಣ್ಣೀರಲ್ಲ, ಆನಂದ ಭಾಷ್ಪ

Published:
Updated:

ಸಿಂದಗಿ: ಹೃದಯ ತುಂಬಿ ಬಂದಿದೆ. ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಇದು ಕಣ್ಣೀರಲ್ಲ. ಆನಂದ ಭಾಷ್ಪ. ಭಾವುಕರಾಗಿ ಹೀಗೆ ನುಡಿದರು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ.

ಸೋಮವಾರ ನಗರದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ವ್ಯಕ್ತಿ ಜೊತೆ ಹೆಂಡತಿ, ಮಕ್ಕಳು, ಬಂಧು–ಬಳಗ ಯಾರೂ ಬರುವುದಿಲ್ಲ. ಹುಟ್ಟು–ಸಾವುಗಳ ಮಧ್ಯೆದ ಬದುಕು ಸಾರ್ಥಕವಾಗಬೇಕಾದರೆ ಸಮಾಜದ ಋಣ ತೀರಿಸಬೇಕು. ನಾನು ಜಾತಿ, ಮತ ಭೇದ ಎಣಿಸದೆ ಎಲ್ಲ ಸಮುದಾಯದ ಜನರನ್ನು ಬಂಧುಗಳೆಂಬ ಭಾವನೆಯಿಂದ ಪ್ರಾಮಾಣಿಕವಾಗಿ ಸೇವಾ ಕಾರ್ಯ ಮುಂದುವರಿಸುವೆ’ ಎಂದು ನುಡಿದರು.

‘ಅಧಿಕಾರ ಬರೀ ಅಭಿವೃದ್ಧಿಗೆ ಮಾತ್ರ ಸೀಮಿತ. ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಆಡಳಿತ ನಡೆಸುವೆ’ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಬಿ.ಎಸ್. ಪಾಟೀಲ ನಿಧನದ ಹಿನ್ನೆಲೆಯಲ್ಲಿ ಸಚಿವರ ಮೆರವಣಿಗೆ ರದ್ದುಪಡಿಸಲಾಯಿತು. ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ, ವಿವೇಕಾನಂದ, ಕನಕದಾಸ ಮಹಾತ್ಮರ ಪುತ್ಥಳಿಗಳಿಗೆ ಸಚಿವರು ಗೌರವ ನಮನ ಸಲ್ಲಿಸಿದರು.

ಗ್ರಾಮ ದೇವತೆ ನೀಲಗಂಗಾದೇವಿ ದೇವಸ್ಥಾನದಲ್ಲಿ ಧರ್ಮದರ್ಶಿ ಶಿರೂಗೌಡ ದೇವರಮನಿ, ಕಾಳಿಕಾದೇವಿ ದೇವಸ್ಥಾನದಲ್ಲೂ ಸನ್ಮಾನ ಕಾರ್ಯಕ್ರಮ ನಡೆಯಿತು. ಆನಂದ ಚಿತ್ರಮಂದಿರಲ್ಲಿ ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ಸಚಿವರನ್ನು ಸನ್ಮಾನಿಸಲು ನೂಕು ನುಗ್ಗಲು ಉಂಟಾಯಿತು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಣ್ಣ ಬಿರಾದಾರ, ವಕ್ತಾರ ಸಿದ್ದಣ್ಣ ಚೌಧರಿ, ಗುರನಗೌಡ ಪಾಟೀಲ, ಇಮ್ತಿಯಾಜ ಖತೀಬ, ರಾಜಶೇಖರ ಕೂಚಬಾಳ, ಮಂಜುನಾಥ ಬಿಜಾಪುರ, ತಮ್ಮನಗೌಡ ಪಾಟೀಲ, ಶಾಂತಗೌಡ ಬಿರಾದಾರ ಮಲಘಾಣ, ಸಿದ್ದು ಪಾಟೀಲ, ಗೊಲ್ಲಾಳಪ್ಪಗೌಡ ಪಾಟೀಲ, ಶೈಲಜಾ ಸ್ಥಾವರಮಠ, ಉಮೇಶ ಜೋಗೂರ, ಸೋಮನಗೌಡ ಬಿರಾದಾರ, ನಾಜಮಿ ದೇವರಮನಿ, ಬಸವರಾಜ ಯರನಾಳ, ಡಾ.ರಾಜಶೇಖರ ಸಂಗಮ ಇದ್ದರು. ಸಲೀಂ ಜುಮನಾಳ ನಿರೂಪಿಸಿದರು.

ನಾಲ್ಕು ಬಾರಿ ಸೋತರೂ ಧೃತಿಗೆಡಲಿಲ್ಲ. ನಿರಂತರವಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ ಪ್ರತಿಫಲವಾಗಿ ಅಧಿಕಾರ ಸಿಕ್ಕಿದೆ. ಅವರ ಋಣ ತೀರಿಸುವೆ.

- ಎಂ.ಸಿ.ಮನಗೂಳಿ, ತೋಟಗಾರಿಕೆ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry