ಠೇವಣಿ ಹಣ ವಂಚನೆ: ಗ್ರಾಹಕರ ಪ್ರತಿಭಟನೆ

7

ಠೇವಣಿ ಹಣ ವಂಚನೆ: ಗ್ರಾಹಕರ ಪ್ರತಿಭಟನೆ

Published:
Updated:

ಲಿಂಗಸುಗೂರು: ಹೊಸಪೇಟೆಯ ಜನಸ್ನೇಹಿ ರಿಯಲ್‌ ವೆಲ್ತ್‌ ಸಲ್ಯೂಷನ್‌ ಪ್ರೈವೇಟ್‌ ಕಂಪನಿ ಠೇವಣಿ ಹಣ ಮರುಪಾವತಿಸದ ಕಾರಣ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

2013– 14ರಲ್ಲಿ ಲಿಂಗಸುಗೂರಲ್ಲಿ ಕಚೇರಿ ಆರಂಭಿಸಿದ ಕಂಪನಿ ಹೆಚ್ಚಿನ ಕಮಿಷನ್‌ ಆಮಿಷ ನೀಡಿ 250ಕ್ಕೂ ಹೆಚ್ಚು ಏಜೆಂಟರ್‌ನ್ನು ನೇಮಿಸಿಕೊಂಡಿದೆ. ಬಹುತೇಕ ಏಜೆಂಟರಾಗಿದ್ದವರು ಅಂಗನವಾಡಿ ಕಾರ್ಯಕರ್ತೆಯರು. 5 ಸಾವಿರ ಗ್ರಾಹಕರಿಂದ ತಲಾ ₹30 ಸಾವಿರದಿಂದ 50 ಸಾವಿರ ಠೇವಣಿ ಹಣ ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ.

ಹಣ ನೀಡುವಂತೆ ಸೋಮವಾರ ಗ್ರಾಹಕರು ಕಚೇರಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕವಾಗಿ ₹500ರಿಂದ ₹2000 ಹಣ ಕಟ್ಟುತ್ತಿದ್ದರು.

ಬಾಂಡ್‌ ಮರಳಿ ನೀಡಿ ಹಣ ವಾಪಸ್ಸು ಮಾಡುವಂತೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ ಎಂದು ಗ್ರಾಹಕರಾದ ಅಮರಯ್ಯ, ವೀರಭದ್ರಪ್ಪ, ಶಿವಕುಮಾರ ಅವರು ಪ್ರತಿಭಟನೆ ನಡೆಸಿದರು.

ಕಚೇರಿ ನಾಮಫಲಕ ತೆಗೆದುಹಾಕಿ ದಿಶಾ ರಿಯಲ್‌ ಪ್ರೊಡ್ಯೂಸರ್‌ ಕಂಪೆನಿ ಎಂದು ನಾಮಫಲಕ ಹಾಕಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಕಣ್ಮರೆಯಾಗಿದ್ದಾರೆ. ಕೊಪ್ಪಳ, ಹೊಸಪೇಟೆ, ವಿಜಯಪುರ ಇತರೆ ಪಟ್ಟಣಗಳಲ್ಲಿ ಭೂಮಿ ಖರೀದಿಸಿ ನಿವೇಶನ ಮಾಡಲಾಗಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry