ಕಡಬಗೆರೆ ಶ್ರೀನಿವಾಸ್‌ನ ಶೂಟೌಟ್ ಪ್ರಕರಣದಲ್ಲಿ ರಾಜಿಯಾದ ದೂರುದಾರರು

7

ಕಡಬಗೆರೆ ಶ್ರೀನಿವಾಸ್‌ನ ಶೂಟೌಟ್ ಪ್ರಕರಣದಲ್ಲಿ ರಾಜಿಯಾದ ದೂರುದಾರರು

Published:
Updated:
ಕಡಬಗೆರೆ ಶ್ರೀನಿವಾಸ್‌ನ ಶೂಟೌಟ್ ಪ್ರಕರಣದಲ್ಲಿ ರಾಜಿಯಾದ ದೂರುದಾರರು

ಬೆಂಗಳೂರು: ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಗೂ ಶೂಟೌಟ್ ನಂತರ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿ ದೂರುದಾರರು ಮತ್ತು ಆರೋಪಿಗಳು ರಾಜಿ ಆಗಿದ್ದಾರೆ.

ಈ ಕುರಿತ ಪ್ರಕರಣ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದ ಎದುರು ಬುಧವಾರ ವಿಚಾರಣೆಗೆ ಬಂದಿತ್ತು.

ಪ್ರಕರಣದ ಆರೋಪಿಗಳಾದ ಪತ್ರಕರ್ತ ಅಗ್ನಿ ಶ್ರೀಧರ್, ರೋಹಿತ್ ಹಾಗೂ ದೂರುದಾರ ರಮೇಶ್ ಹಾಜರಿದ್ದು ರಾಜಿಗೆ ಒಪ್ಪಿಗೆ ಸೂಚಿಸಿದರು.

‘ತಪ್ಪು ಕಲ್ಪನೆಯಿಂದ ಕೇಸ್ ದಾಖಲಿಸಿದ್ದಾಗಿ’ ದೂರುದಾರರು ಹೇಳಿಕೆ ನೀಡುವ ಮೂಲಕ ನ್ಯಾಯಪೀಠಕ್ಕೆ ಜಂಟಿ ಮೆಮೊ ಕೂಡಾ ಸಲ್ಲಿಸಿದರು.

ಇಬ್ಬರ ಹೇಳಿಕೆಯನ್ನು ಆಧರಿಸಿ ಪ್ರಕರಣವನ್ನು ನ್ಯಾಯಮೂರ್ತಿಗಳು ವಜಾಗೊಳಿಸಿ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry