ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ₹40 ಲಕ್ಷ ಮೊತ್ತದ ಒಡವೆ ಕಳವು

7

ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ₹40 ಲಕ್ಷ ಮೊತ್ತದ ಒಡವೆ ಕಳವು

Published:
Updated:
ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ₹40 ಲಕ್ಷ ಮೊತ್ತದ ಒಡವೆ ಕಳವು

ತುಮಕೂರು: ನಗರದ ಸಿಎಸ್‌ಐ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆ ಅಧಿಕಾರಿಗಳು ಎಂದು ಹೇಳಿಕೊಂಡು ಮನೆಯೊಳಗೆ ಹೋದ ಅಪರಿಚಿತ ವ್ಯಕ್ತಿಗಳು ₹ 40 ಲಕ್ಷ ಮೊತ್ತದ ಆಭರಣಗಳನ್ನು ದೋಚಿದ್ದಾರೆ.

ದಿವಂಗತ ತಿಪ್ಪಯ್ಯಶೆಟ್ಟರ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ಮನೆಯಲ್ಲಿ ತಿಪ್ಪಯ್ಯಶೆಟ್ಟರ ಅವರ ಪತ್ನಿ ಮನೋಹರ ಅವರು ಒಬ್ಬರೇ ಇದ್ದರು. ಮಧ್ಯಾಹ್ನ ಇವರ ಮನೆಗೆ  ಬಂದ ಇಬ್ಬರು ತಾವು ಸ್ಮಾರ್ಟ್ ಸಿಟಿ ಅಭಿವೃದ್ಧಿ ಅಧಿಕಾರಿಗಳು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಮನೆಯ ಒಳಗಡೆ ಹೋಗಿ ಚರಂಡಿ ವ್ಯವಸ್ಥೆ ಹೇಗಿದೆ? ಪೈಪ್‌ ಲೈನ್ ಸಂಪರ್ಕ ಎಲ್ಲಿಂದ ಎಲ್ಲಿಗೆ ಕೊಡಲಾಗಿದೆ? ಮನೆಯ ವಿಸ್ತೀರ್ಣ ಎಷ್ಟು? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಹೀಗೆ ಪ್ರಶ್ನೆ ಕೇಳುತ್ತಲೇ ಮನೆಯ ಕೆಳಗಡೆ ಒಬ್ಬ ನಿಂತಿದ್ದಾನೆ. ಇನ್ನೊಬ್ಬ ಮಹಡಿ ಮೇಲೆ ಹತ್ತಿ ವೀಕ್ಷಿಸಿದ್ದಾರೆ. ಬಳಿಕ ಬರುತ್ತೇವೆ ಎಂದು ಹೇಳಿದ್ದಾರೆ.

ಸಂಜೆ 6 ಗಂಟೆ ಹೊತ್ತಿಗೆ ಮನೋಹರ ಅವರು ಮನೆಯ ಒಳಗಡೆ ರೂಮಿಗೆ ಹೋದಾಗ ಒಡವೆ ಕಳವು ಆಗಿರುವುದು ಗೊತ್ತಾಗಿದೆ ಎಂದು ತಿಳಿದಿದೆ.

ಸ್ಥಳಕ್ಕೆ ಹೊಸ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry