ವೆಚ್ಚ ಭರಿಸಲು ಮಲ್ಯಗೆ ಸೂಚನೆ

7

ವೆಚ್ಚ ಭರಿಸಲು ಮಲ್ಯಗೆ ಸೂಚನೆ

Published:
Updated:
ವೆಚ್ಚ ಭರಿಸಲು ಮಲ್ಯಗೆ ಸೂಚನೆ

ಲಂಡನ್‌: ಬಾಕಿ ಹಣ ವಸೂಲಿ ಮಾಡಲು ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್‌ಗಳಿಗೆ ₹1.815 ಕೋಟಿ ಪಾವತಿಸುವಂತೆ ಉದ್ಯಮಿ ವಿಜಯ ಮಲ್ಯ ಅವರಿಗೆ ಬ್ರಿಟನ್‌ ಹೈಕೋರ್ಟ್‌ ಸೂಚಿಸಿದೆ.

‘ವಿಜಯ ಮಲ್ಯ ಮತ್ತು ಬ್ಯಾಂಕ್‌ಗಳು ವೆಚ್ಚದ ಬಗ್ಗೆ ಒಪ್ಪಂದಕ್ಕೆ ಬಾರದಿದ್ದರೆ ನ್ಯಾಯಾಲಯವೇ ಪರಿಶೀಲನೆ ನಡೆಸಲಿದೆ’ ಎಂದು ವಕೀಲರು ತಿಳಿಸಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ಮಲ್ಯ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮತ್ತೆ ಮನವಿ ಸಲ್ಲಿಸಲು ಪರವಾನಗಿ ಪಡೆಯಲು ಮಲ್ಯ ಅವರು ಮೇಲ್ಮನವಿ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಗುತ್ತದೆ’ ಎಂದು ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry