‘ಸಾಲ ಮನ್ನಾ ಮಾಡದಿದ್ದರೆ ಸಿಎಂಗೆ ವಾನಪ್ರಸ್ಥಾಶ್ರಮವೇ ಗತಿ’

7

‘ಸಾಲ ಮನ್ನಾ ಮಾಡದಿದ್ದರೆ ಸಿಎಂಗೆ ವಾನಪ್ರಸ್ಥಾಶ್ರಮವೇ ಗತಿ’

Published:
Updated:
‘ಸಾಲ ಮನ್ನಾ ಮಾಡದಿದ್ದರೆ ಸಿಎಂಗೆ ವಾನಪ್ರಸ್ಥಾಶ್ರಮವೇ ಗತಿ’

ತುಮಕೂರು: ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರಿಗೆ ಮಾತು ಕೊಟ್ಟಂತೆ ಸಾಲ ಮನ್ನಾ ಮಾಡಬೇಕು. ತಪ್ಪಿ ನಡೆದರೆ ವಾನಪ್ರಸ್ಥಾಶ್ರಮವೇ ಗತಿ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿಯಾದರೆ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರೇ ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಅವರನ್ನು ಸಾಲ ಮನ್ನಾ ಮಾಡಿ ಎಂದು ಯಾರೂ ಕೇಳಿರಲಿಲ್ಲ. ರೈತರ ಸಾಲವಷ್ಟೇ ಅಲ್ಲ. ಒಂದು ಹೆಜ್ಜೆ ಮುಂದೆ ಹೋಗಿ ಸ್ತ್ರೀಶಕ್ತಿ ಸಂಘಗಳ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದರು’ ಎಂದು ವಿವರಿಸಿದರು.

'ಮುಖ್ಯಮಂತ್ರಿ ಆದ ಬಳಿಕ ರೈತರ ಸಭೆಯಲ್ಲಿ ಸಾಲ ಮನ್ನಾ ಮಾಡಲು 15 ದಿನ ಕಾಲಾವಕಾಶ ಕೇಳಿದ್ದರು. ಈಗ ಆ 15 ದಿನ ಕಳೆದಿವೆ. ಸಾಲ ಮನ್ನಾ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಕೊಟ್ಟ ಮಾತು ತಪ್ಪಿದಂತಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry