ಇರಾನ್‌ಗೆ ಜಯ ತಂದಿತ್ತ ಮೊರೊಕ್ಕೊ ಆಟಗಾರ!

7
ತಮ್ಮದೇ ಗೋಲು ‍ಪೆಟ್ಟಿಗೆಯೊಳಗೆ ಚೆಂಡು ಒದ್ದ ಅಜೀಜ್‌

ಇರಾನ್‌ಗೆ ಜಯ ತಂದಿತ್ತ ಮೊರೊಕ್ಕೊ ಆಟಗಾರ!

Published:
Updated:
ಇರಾನ್‌ಗೆ ಜಯ ತಂದಿತ್ತ ಮೊರೊಕ್ಕೊ ಆಟಗಾರ!

ಸೇಂಟ್‌ ಪೀಟರ್ಸ್‌ಬರ್ಗ್‌ (ಎಎಫ್‌ಪಿ): ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಮುಂಚೂಣಿ ವಿಭಾಗದ ಆಟಗಾರ ಅಜೀಜ್‌ ಬೌಹಾದೌಜ್‌ ಶುಕ್ರವಾರ ಮೊರೊಕ್ಕೊ ತಂಡದ ಪಾಲಿಗೆ ಖಳನಾಯಕರಾದರು.

ಕ್ರೆಸ್ಟೊವ್‌ಸ್ಕಿ ಕ್ರೀಡಾಂಗಣದಲ್ಲಿ ನಡೆದ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಅಜೀಜ್‌, ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದು ಇರಾನ್‌ ತಂಡಕ್ಕೆ ಗೆಲುವು ತಂದುಕೊಟ್ಟರು!

ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಇರಾನ್‌ ಮತ್ತು ಮೊರೊಕ್ಕೊ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ನಿಗದಿತ (90 ನಿಮಿಷಗಳು) ಅವಧಿಯ ಆಟ ಗೋಲು ರಹಿತವಾಗಿತ್ತು. ಹೆಚ್ಚುವರಿ ಅವಧಿಯಲ್ಲಿ ಅಜೀಜ್‌ ಮಾಡಿದ ಎಡವಟ್ಟು ಮೊರೊಕ್ಕೊ ತಂಡಕ್ಕೆ ಮುಳುವಾಯಿತು.

90+5ನೇ ನಿಮಿಷದಲ್ಲಿ ಇರಾನ್‌ ತಂಡದ ಆಟಗಾರ ಮೊರೊಕ್ಕೊ ತಂಡದ ಆವರಣದ ಎಡ ತುದಿಯಿಂದ ಒದ್ದ ಚೆಂಡನ್ನು ತಡೆಯಲು ಅಜೀಜ್‌ ಮುಂದಾದರು. ಅವರ ತಲೆಗೆ ತಾಗಿದ ಚೆಂಡು ಮಿಂಚಿನ ವೇಗದಲ್ಲಿ ಸಾಗಿ ಅವರದೇ ಗೋಲು ಪೆಟ್ಟಿಗೆಯ ಬಲೆಯೊಳಗೆ ಮುತ್ತಿಕ್ಕುತ್ತಿದ್ದಂತೆ ಮೊರೊಕ್ಕೊ ಆಟಗಾರರು ಅವಕ್ಕಾದರು. ಇರಾನ್‌ ಪಾಳಯದಲ್ಲಿ ಸಂಭ್ರಮದ ಉಕ್ಕಿ ಹರಿಯಿತು.

ಮೊರೊಕ್ಕೊ ತಂಡ ಪಂದ್ಯದ ಶುರುವಿನಿಂದಲೂ ಪರಿಣಾಮಕಾರಿ ಆಟ ಆಡಿತು. ಈ ತಂಡಕ್ಕೆ ಗೋಲು ಗಳಿಸುವ ಹಲವು ಅವಕಾಶಗಳು ಸಿಕ್ಕಿದ್ದವು. ಆದರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಈ ತಂಡದ ಆಟಗಾರರು ವಿಫಲರಾದರು.

ದ್ವಿತೀಯಾರ್ಧದಲ್ಲಿ ಭಿನ್ನ ರಣನೀತಿ ಹೆಣೆದು ಆಡಿದ ಇರಾನ್‌ ಮೊರೊಕ್ಕೊಗೆ ಪ್ರಬಲ ಪೈಪೋಟಿ ಒಡ್ಡಿತು. ಹೆಚ್ಚುವರಿ ಅವಧಿಯಲ್ಲೂ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಹೀಗಾಗಿ ಪಂದ್ಯ ಡ್ರಾ ಆಗಬಹುದೆಂದು ಅಂದಾಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry