1ಕೆ.ಜಿ ಚಿನ್ನ ವಶ: 6 ಬಂಧನ

7

1ಕೆ.ಜಿ ಚಿನ್ನ ವಶ: 6 ಬಂಧನ

Published:
Updated:
1ಕೆ.ಜಿ ಚಿನ್ನ ವಶ: 6 ಬಂಧನ

ಬೆಂಗಳೂರು: ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮನೆ, ಮೊಬೈಲ್‌ ಮತ್ತು ಸರಗಳ್ಳತನ ನಡೆಸಿದ ಆರು ಮಂದಿ ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಿರಣ್‌ಕುಮಾರ್‌ ಟಿ.ಎಚ್‌ (20), ವಿಶ್ವಾಸ್‌ (20), ನಾಗರಾಜ (46), ಗಿರೀಶ್‌ಕುಮಾರ್‌ (26), ಮನುಕುಮಾರ್‌ (29) ಮತ್ತು ಜ್ಯೋತಿ ಗಿರೀಶ್‌ (30) ಬಂಧಿತರು. ಆರೋಪಿಗಳಿಂದ ಚಿನ್ನ, ಮೊಬೈಲ್‌ ಖರೀದಿಸಿದ ಆರೋಪದ ಮೇಲೆ ದೇವರಾಂ ನಗರಾಂಜಿ (55) ಮತ್ತು ದಿನೇಶ್‌ ಕುಮಾರ್‌ ದೇವರಾಂ (27) ಅವರನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ₹ 33.59 ಲಕ್ಷ ಮೌಲ್ಯದ 1 ಕೆ.ಜಿ 120 ಗ್ರಾಂ ಚಿನ್ನಾಭರಣ ಮತ್ತು ಮೊಬೈಲ್‌ ಫೋನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಚಂದ್ರಾ ಬಡಾವಣೆ, ವಿಜಯನಗರ, ಕಾಮಾಕ್ಷಿಪಾಳ್ಯ, ಶ್ರೀರಾಂಪುರ, ಹುಳಿಮಾವು, ಸುಬ್ರಮಣ್ಯಪುರ, ಉಪ್ಪಾರಪೇಟೆ, ಕೆಂಗೇರಿ, ಬ್ಯಾಟರಾಯನಪುರ, ಕೆ.ಪಿ.ಅಗ್ರಹಾರ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಮನೆ, ಮೊಬೈಲ್‌ ಮತ್ತು ಸರಗಳ್ಳತನ ನಡೆಸಿದ್ದರು.

ಐಷಾರಾಮಿ ಜೀವನ ನಡೆಸಬೇಕು ಎನ್ನುವ ಖಯಾಲಿ ಬಿದ್ದ ಆರೋಪಿಗಳು ದ್ವಿಚಕ್ರ ವಾಹನ ಬಳಸಿಕೊಂಡು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೂ ಅಲ್ಲದೆ ಆರೋಪಿಗಳು ಬಿ.ಎಂ.ಟಿ.ಸಿ ಬಸ್‌ ಮತ್ತು ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry