7
ಅನುದಾನದ ಕೊರತೆಯ ನೆಪ

ಪೂರ್ಣಗೊಳ್ಳದ ಹಾಸ್ಟೆಲ್ ಕಟ್ಟಡ

Published:
Updated:
ಪೂರ್ಣಗೊಳ್ಳದ ಹಾಸ್ಟೆಲ್ ಕಟ್ಟಡ

ಕಾರವಾರ: ತಾಲ್ಲೂಕಿನ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಎರಡು ಹಾಸ್ಟೆಲ್‌ಗಳ ನಿರ್ಮಾಣ ಕಾಮಗಾರಿ ಎರಡು ವರ್ಷ ಸಮೀಪಿಸುತ್ತಿದ್ದರೂ ಈವರೆಗೆ ಪೂರ್ಣಗೊಂಡಿಲ್ಲ.

ಕಾಲೇಜಿನ ಸಮೀಪದಲ್ಲೇ ಈ ಎರಡು ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಕರ್ನಾಟಕ ರಸ್ತೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ವಹಿಸಿ­ಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಮೀಸಲು ಅನುದಾನ­ದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ಒಂದು ಕಟ್ಟಡ ಹಾಗೂ ಸಾಮಾನ್ಯ ಅನುದಾನದ ಅದೇ ವೆಚ್ಚದಲ್ಲಿ ಇನ್ನೊಂದು ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಆದರೆ, ಈವರೆಗೂ ಪೂರ್ಣಗೊಳ್ಳದ ಹಾಸ್ಟೆಲ್‌ನಿಂದಾಗಿ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ದೂರದೂರಿನಿಂದ ಬರುವ ಬಡ ವಿದ್ಯಾರ್ಥಿಗಳು ತಮ್ಮ ವಸತಿಗಾಗಿಯೆ ಸಾಕಷ್ಟು ವೆಚ್ಚ ಮಾಡುವ ಪ್ರಸಂಗ ಎದುರಾಗಿದೆ.

ಅನುದಾನದ ಕೊರತೆಯ ನೆಪ: ‘ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಅನುದಾನದ ಕೊರತೆ ಉಂಟಾಗಿ ಸ್ವಲ್ಪ ವಿಳಂಬವಾಗಿದೆಯಷ್ಟೆ. ಒಟ್ಟಾರೆ ₹ 3 ಕೋಟಿ ಅನುದಾನದಲ್ಲಿ ₹ 2.25 ಕೋಟಿ ಬಂದಿದೆ. ಇನ್ನೂ ₹ 75 ಕೋಟಿ ಬರಬೇಕಿದೆ. ಈ ಬಗ್ಗೆ ವರದಿಗಳನ್ನು ಸರ್ಕಾರಕ್ಕೆ ಹಾಗೂ ಮುಖ್ಯ ಕಚೇರಿಗೆ ಕಳುಹಿಸುತ್ತಿದ್ದೇವೆ’ ಎನ್ನುತ್ತಾರೆ ಕೆಆರ್‌ಡಿಐಎಲ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ತೀರ್ಥಲಿಂಗಪ್ಪ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಹಾಸ್ಟೆಲ್‌ನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವವರನ್ನೇ ಪ್ರಶ್ನಿಸಿ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry