7

ಚಿನ್ನಾಭರಣ ವಲಯಕ್ಕೆ ಉತ್ತೇಜನ ರಾಷ್ಟ್ರೀಯ ಸಮಿತಿ ರಚನೆಗೆ ಸಿದ್ಧತೆ

Published:
Updated:

ನವದೆಹಲಿ: ಕಾರ್ಮಿಕರ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಹರಳು ಮತ್ತು ಚಿನ್ನಾಭರಣ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರೀಯ ಸಮಿತಿಯೊಂದನ್ನು ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಉದ್ಯಮದ ಭಾಗಿದಾರರ ಒಳಗೊಳ್ಳುವಿಕೆ, ದೇಶಿ ಮತ್ತು ರಫ್ತು ವಹಿವಾಟು ಸುಸ್ಥಿರವಾಗಿಸುವುದು ಹೇಗೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಒಕ್ಕೂಟ ರಚನೆ ಮಾಡಿ ಅದರಲ್ಲಿ ರಾಜ್ಯವಾರು ಸದಸ್ಯರನ್ನು ಒಳಗೊಂಡಿರುವಂತೆ ಮಾಡುವುದು ಸಮಿತಿಯ ಉದ್ದೇಶವಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಸಮಿತಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶಿ ಮಟ್ಟದಲ್ಲಿ ವಲಯದ ಪ್ರಗತಿ ಮತ್ತು ರಫ್ತು ಹೆಚ್ಚಿಸುವ ಬಗ್ಗೆ ಈ ಸಮಿತಿಯು ಕೆಲಸ ಮಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry