ಸೋಮವಾರ, ಮೇ 10, 2021
19 °C

ಮಂಗಳವಾರ 18–6–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳವಾರ 18–6–1968

ಸಣ್ಣ ಕಾರು ಯೋಜನೆ: ಪ್ರಸಕ್ತ ವರ್ಷ ಆಖೈರು ನಿರ್ಧಾರ

ಮದರಾಸು, ಜೂ. 17–
ಸಣ್ಣ ಕಾರು ತಯಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ವರ್ಷದಲ್ಲೇ ನಿರ್ಧಾರ ಕೈಗೊಳ್ಳಲಿದೆಯೆಂದು ಕೈಗಾರಿಕಾಭಿವೃದ್ಧಿ ಸಚಿವ ಭಾನುಪ್ರಕಾಶ್ ಸಿಂಗ್ ಅವರು ಇಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.

ಸಣ್ಣ ಕಾರು ಯೂನಿಟ್‌ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯನ್ನು ತುರ್ತು ಪರಿಶೀಲನೆಗಾಗಿ ಯೋಜನಾ ಆಯೋಗಕ್ಕೆ ಸಲ್ಲಿಸಲಾಗುವುದೆಂದು ಅವರು ವಿವರಿಸಿದರು.

ಆದಿಚುಂಚನಗಿರಿ ಸ್ವಾಮಿಗಳಿಗೆ ನಗರದ ಭಕ್ತವೃಂದದ ಶ್ರದ್ಧೆ, ಗೌರವದ ಸ್ವಾಗತ

ಬೆಂಗಳೂರು, ಜೂ. 17–
ಸಂಸ್ಥಾನಾಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಪ್ರಥಮವಾಗಿ ದರ್ಶನ ನೀಡುತ್ತಿರುವ ಆದಿಚುಂಚನಗಿರಿಯ 70ನೇ ಮಠಾಧೀಶ ಶ್ರೀ ಜಗದ್ಗುರು ಶ್ರೀರಾಮಾನಂದನಾಥ ಸ್ವಾಮಿಗಳವರಿಗೆ ನಗರದ ಸಹಸ್ರಾರು ಆಸ್ತಿಕರ ವೃಂದ, ಶ್ರದ್ಧೆಯ ಸ್ವಾಗತ ಬಯಸಿ, ಭಕ್ತಿಯ ನಮನ ಅರ್ಪಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.