ಮಂಗಳವಾರ, ಜುಲೈ 5, 2022
25 °C

ಅರ್ತ್ ವಾಚ್ ಪರಿಸರ ಕಲಿಕೆ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ತ್ ವಾಚ್ ಪರಿಸರ ಕಲಿಕೆ ಆ್ಯಪ್‌

ಬಟರ್‌ಫ್ಲೈಸ್‌ ಆ್ಯಂಡ್‌ ಬೀಸ್‌

ಚಿಟ್ಟೆಗಳು ಮತ್ತು ಜೇನುನೋಣಗಳ ಪ್ರಭೇದಗಳ ಮಾಹಿತಿಯನ್ನು ತಿಳಿಯಲು ಉಪಯುಕ್ತವಾದ ಆ್ಯಪ್. ಇದನ್ನು ವಿಜ್ಞಾನದಲ್ಲಿ ನಾಗರಿಕರು ಪಾಲ್ಗೊಳ್ಳುವಿಕೆ ಎಂಬ ತತ್ವದ ಅಡಿಯಲ್ಲಿ ರಚಿಸಲಾಗಿದೆ. ಪರಿಸರದಲ್ಲಿ ಪ್ರಮುಖ ಪಾತ್ರವಹಿಸುವಲ್ಲಿ ಚಿಟ್ಟೆಗಳು ಮತ್ತು ಜೇನುನೋಣಗಳ ಪಾತ್ರ, ಮತ್ತು ಅವುಗಳು ನಿರ್ವಿಸುವ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿಯೂ ಸಹ ಹೈ ರೆಸಲ್ಯೂಷನ್ ಚಿತ್ರಗಳು, ದತ್ತಾಂಶ, ವಿರಳತೆ, ಪ್ರಾದೇಶಿಕ ವಲಯ, ಚಿಟ್ಟಿಗಳ ಗಾತ್ರ, ಆವಾಸಸ್ಥಾನ ಹಾಗೂ ಇತ್ಯಾದಿ ಮಾಹಿತಿ ಇಲ್ಲಿ ಲಭ್ಯ.

ಹೆಚ್ಚಿನ ಮಾಹಿತಿಗೆ– in.earthwatch.org/ ಜಾಲತಾಣಕ್ಕೆ ಭೇಟಿನೀಡಿ.

ಸ್ಪೈಡರ್‌ ವಾಚ್‌ (Spider Watch)

ವಿಜ್ಞಾನದಲ್ಲಿ ನಾಗರಿಕರು ಪಾಲ್ಗೊಳ್ಳುವಿಕೆ ಎಂಬ ತತ್ವದ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಆ್ಯಪ್. ಕೀಟಗಳ ಕುರಿತು ಸಂಶೋಧನೆ ನಡೆಸಿರುವ ಮತ್ತು ಕೀಟಗಳು ಮತ್ತು ಜೇಡಗಳ ಅಧ್ಯಯನಕ್ಕಾಗಿ ಕ್ಷೇತ್ರ ಮಾರ್ಗದರ್ಶಿ ಎಂಬ ಪುಸ್ತಕವನ್ನು ರಚಿಸಿದ ಅನಿರುದ್ಧ ದಾಮೋರಿಕರ್ ಅವರ ಮಾರ್ಗದರ್ಶನದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಪ್ರಪಂಚದಾದ್ಯಂತ ಸಾಮಾನ್ಯವಾಗಿ ಕಂಡುಬರುವ 50 ಜೇಡರಹುಳುಗಳ ಬಗ್ಗೆ ಮಾಹಿತಿ, ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರ, ಹಾನಿಕಾರಕ ಕೀಟಗಳ ನಿಯಂತ್ರಿಸುವಲ್ಲಿ ಇವುಗಳ ಪಾತ್ರ ಹಾಗೂ ಇತ್ಯಾಧಿ ವಿಷಯಗಳನ್ನು ತಿಳಿಯಬಹುದು. ಜೇಡಗಳ ಸಾಮಾನ್ಯ ಹೆಸರು ಹಾಗೂ ವೈಜ್ಞಾನಿಕ ಹೆಸರಗಳನ್ನು ತಿಳಿಯಬಹುದು.

ಬರ್ಡ್‌ ಫೈಂಡ್‌ (Bird Find)

ಈ ಕಿರುತಂತ್ರಾಂಶವನ್ನು ಪಕ್ಷಿ ವಿಜ್ಞಾನಿ ಹಾಗೂ ಸಂಶೋಧಕರಾದ ಡಾ. ರಾಜು ಕಸಂಬೆ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಯಾವ ಪ್ರದೇಶದಲ್ಲಿ, ಯಾವ ಹಕ್ಕಿಗಳು ಹೆಚ್ಚಾಗಿವೆ ಎಂಬ ವಿವರಗಳನ್ನು ನೀಡುತ್ತದೆ. ಪಕ್ಷಿಗಳ ವೈವಿಧ್ಯತೆ, ಅಳಿವಿನಂಚಿನಲ್ಲಿರುವ

ಮತ್ತು ವಿಶಿಷ್ಟವಾದ ಪಕ್ಷಿಗಳು ಕುರಿತ ಮಾಹಿತಿ ಇದರಲ್ಲಿದೆ. ಪಕ್ಷಿಗಳ ಸಾಮಾನ್ಯ ಹೆಸರು ಮತ್ತು ಅವುಗಳ ವೈಜ್ಞಾನಿಕ ಹೆಸರುಗಳನ್ನು, ಅವುಗಳ ಆವಾಸಸ್ಥಾನ, ಗಾತ್ರ ಮತ್ತು ಅವುಗಳ ವೈಶಿಷ್ಟತೆಯನ್ನು ತಿಳಿಯಬಹುದು. ಪಕ್ಷಿಗಳ ಅತ್ಯುತ್ತಮವಾದ ಚಿತ್ರಗಳನ್ನು ಅಳವಡಿಸಿದ್ದು, ಇವುಗಳನ್ನು ವಾಲ್ ಪೇಪರ್ ಆಗಿ ಅಳವಡಿಸಿಕೊಳ್ಳಬಹುದು.

ಪೊಲ್ಲಿನೇಟರ್ಸ್‌ (Pollinators)

ಈ ಕಿರುತಂತ್ರಾಂಶವು ಪರಾಗದ ವರ್ಗಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ಕೀಟ ಮತ್ತು ಅವುಗಳ ಪ್ರಭೇದದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಜೇನುನೋಣಗಳು, ಪತಂಗಗಳು, ಜೀರುಂಡೆಗಳು, ಚೀಟೆಗಳು, ಕಣಜಗಳು, ಇರುವೆಗಳು ಮತ್ತು ಇತ್ಯಾದಿ ಪರಾಗಸ್ಪರ್ಶದ ಕೀಟಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಕೀಟ ಅಧ್ಯಯನ ಸಂಶೋಧಕ ಮತ್ತು ವಿಜ್ಞಾನಿ ಡಾ. ಜಾನ್ಸನ್ ಸ್ಟಾನ್ಲೆ, ಅವರ ಮಾರ್ಗದರ್ಶನದಲ್ಲಿ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕೀಟಗಳ ಚಿತ್ರಗಳು, ಅವುಗಳ ಸಾಮಾನ್ಯ ಹಾಗೂ ವೈಜ್ಞಾನಿಕ ಹೆಸರು, ಗಾತ್ರ, ವಾಸ ಪ್ರದೇಶ ಮತ್ತು ಇತರೆ ಮಾಹಿತಿ ಇಲ್ಲಿದೆ

ಟ್ರೀ ವಾಚ್‌ (Tree Watch)

ಸಸ್ಯಶಾಸ್ತ್ರಜ್ಞ ಮತ್ತು ಸಸ್ಯ ಪರಿಸರ ತಜ್ಞೆಯಾದ ಡಾ.ಸ್ವಪ್ನ ಪ್ರಭು ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸಸ್ಯ ಪ್ರಭೇದಗಳ ಕುರಿತು ಮಾಹಿತಿಯನ್ನು ನೀಡುವ ಆ್ಯಪ್. ಈ ಕಿರುತಂತ್ರಾಂಶದ ಮೂಲಕ ಭಾರತದಲ್ಲಿರುವ ಅಪೂರ್ವ ಎನಿಸುವ ಮರಗಳ ವೈವಿಧ್ಯತೆ ಮತ್ತು ಅವುಗಳ ಪ್ರಭೇದಗಳನ್ನು ಹಾಗೂ ಮರಗಳು ನಮ್ಮ ಜೀವನದಲ್ಲಿ ವಹಿಸುವ ಮಹತ್ವವಾದ ಪಾತ್ರದ ಬಗ್ಗೆ ತಿಳಿಸುತ್ತದೆ. ಮರಗಳನ್ನು ಗುರುತಿಸುವುದು, ಸ್ಥಳೀಯ ಹೆಸರು ಮತ್ತು ವೈಜ್ಞಾನಿಕ ಹೆಸರು, ಅವುಗಳ ಉಪಯುಕ್ತತೆ, ಅವುಗಳ ಜೈವಿಕ ವಲಯ, ಎತ್ತರ, ಗುಣವಿಶಿಷ್ಟತೆ ಮತ್ತು ಉಪಯುಕ್ತತೆಯ ಕುರಿತು ಮಾಹಿತಿಯನ್ನು ತಿಳಿಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.