ವಿರಾಜಪೇಟೆಯಲ್ಲಿ 8 ಸೆಂ.ಮೀ ಮಳೆ; ಧುಮ್ಮಿಕ್ಕುತ್ತಿದೆ ಗಗನಚುಕ್ಕಿ ಜಲಪಾತ

7

ವಿರಾಜಪೇಟೆಯಲ್ಲಿ 8 ಸೆಂ.ಮೀ ಮಳೆ; ಧುಮ್ಮಿಕ್ಕುತ್ತಿದೆ ಗಗನಚುಕ್ಕಿ ಜಲಪಾತ

Published:
Updated:
ವಿರಾಜಪೇಟೆಯಲ್ಲಿ 8 ಸೆಂ.ಮೀ ಮಳೆ; ಧುಮ್ಮಿಕ್ಕುತ್ತಿದೆ ಗಗನಚುಕ್ಕಿ ಜಲಪಾತ

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದೆ.

ವಿರಾಜಪೇಟೆಯಲ್ಲಿ 8 ಸೆಂ.ಮೀ ಮಳೆಯಾಗಿದ್ದು, ಭಾಗಮಂಡಲದಲ್ಲಿ 5, ಹೊನ್ನಾವರ, ಕಾರವಾರ, ಕ್ಯಾಸಲ್‌ ರಾಕ್‌ನಲ್ಲಿ 4, ಪುತ್ತೂರು, ಮಂಗಳೂರಿನಲ್ಲಿ 3, ಪಣಂಬೂರು, ಶಿರಾಲಿ, ಗೇರುಸೊಪ್ಪ, ಗೋಕರ್ಣ, ಕುಮಟಾ, ಪೊನ್ನಂಪೇಟೆ, ಹಾಸನ, ಕೊಟ್ಟಿಗೆಹಾರ 2, ಧರ್ಮಸ್ಥಳ, ಉಡುಪಿ, ಕುಂದಾಪುರ, ಕೋಟ, ‌ಸಿದ್ಧಾಪುರ, ಮಂಚಿಕೇರಿ, ಜಗಲ್ಬೇಟ್‌, ಮಡಿಕೇರಿ, ಸೋಮವಾರಪೇಟೆ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಆಲೂರು, ಆನೇಕಲ್‌ನಲ್ಲಿ ತಲಾ 1 ಸೆಂ.ಮೀ ಮಳೆ ಬಿದ್ದಿದೆ.

ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಗುಡುಗುಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry