3

ಗಿಳಿ ಭವಿಷ್ಯ ಸುಳ್ಳು ಮಾಡುವುದೇ ಜಪಾನ್?

Published:
Updated:
ಗಿಳಿ ಭವಿಷ್ಯ ಸುಳ್ಳು ಮಾಡುವುದೇ ಜಪಾನ್?

ಟೊಕಿಯೊ/ಮಾಸ್ಕೋ: ಮಂಗಳವಾರ ಮೊರಡೊವಿಯಾ ಅರೆನಾದಲ್ಲಿ ನಡೆಯಲಿರುವ ‘ಎಚ್‌’ ಗುಂಪಿನ ಪಂದ್ಯದಲ್ಲಿ ಜಪಾನ್ ತಂಡವು ಕೊಲಂಬಿಯಾ ವಿರುದ್ಧ ಆಡಲಿದೆ. ಆದರೆ ಈ  ಪಂದ್ಯದಲ್ಲಿ  ಜಪಾನ್ ಸೋಲನುಭವಿಸಲಿದೆ ಎಂದು ‘ಚಿರ್ಪಿ’ ಗಿಳಿಯ ಸೂಚನೆ ನೀಡಿದೆ.

ಉತ್ತರ ಜಪಾನಿನ ನಾಸು ಅನಿಮಲ್ ಕಿಂಗ್‌ಡಮ್‌ನಲ್ಲಿರುವ ಈ ಗಿಳಿಯು ಸೋಮವಾರ ‘ಭವಿಷ್ಯ’ ನುಡಿದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೊಲಂಬಿಯಾ, ಜಪಾನ್ ದೇಶಗಳ ಪುಟ್ಟ ಧ್ವಜಗಳನ್ನು ಚುಚ್ಚಿದ ಹಣ್ಣುಗಳನ್ನು ಈ ಗಿಳಿಯ ಮುಂದೆ ಇಡಲಾಗಿತ್ತು. ಆಗ ಅದು ಕೊಲಂಬಿಯಾ ತಂಡದ ಧ್ವಜವನ್ನು ಎತ್ತಿಕೊಂಡಿತು. ಮೃಗಾಲಯದ ಅಧಿಕಾರಿಯು ಮೂರ್ನಾಲ್ಕು ಸಲ ಬೇರೆ ಬೇರೆ ದೇಶಗಳ ಧ್ವಜಗಳೊಂದಿಗೆ ಕೊಲಂಬಿಯಾ ಮತ್ತು ಜಪಾನ್ ಧ್ವಜಗಳನ್ನು ಸೇರಿಸಿ ಸಾಲಾಗಿ ಇಟ್ಟರು.  ಆದರೆ ಬಹುತೇಕ ಬಾರಿ ಕೊಲಂಬಿಯಾ ಧ್ವಜವನ್ನೇ ಗಿಳಿಯು ಆಯ್ದುಕೊಂಡಿತು.

‘ಒಂದು ಸಲ ಮಾತ್ರ ಎರಡೂ ದೇಶಗಳ ಧ್ವಜಗಳನ್ನು ಎತ್ತಿ  ಕೆಳಗೆ ಹಾಕಿತು. ಅದರಿಂದ ಡ್ರಾ ಆಗುವ ಸಾಧ್ಯತೆಯೂ ಇದೆ’ ಎಂದು ಮೃಗಾಲಯದ ಅಧಿಕಾರಿ ನೊಜೊಮಿ ಒಲಿಕಾವಾ ತಿಳಿಸಿದ್ದಾರೆ.

‘ಈ ಗಿಳಿಗೆ 13 ವರ್ಷವಾಗಿದೆ. 2016ರ ರಿಯೊ ಒಲಿಂಪಿಕ್ಸ್‌ವೇಳೆಯೂ ಏಳು ಕ್ರೀಡೆಗಳ ಬಗ್ಗೆ ಭವಿಷ್ಯ ಸೂಚಿಸಿತ್ತು. ಆದರಲ್ಲಿ ಐದು ನಿಜವಾಗಿದ್ದವು’ ಎಂದು ನೊಜೊಮಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry