ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಿ ಮಾಲಿವಾಲ್, ಧ್ರುವ್ ರಾಠಿಯದ್ದು ಎನ್ನಲಾದ ಫೋನ್‌ ಕರೆ ಸಂಭಾಷಣೆ ಎಐ ಸೃಷ್ಟಿ

Published 30 ಮೇ 2024, 0:18 IST
Last Updated 30 ಮೇ 2024, 0:18 IST
ಅಕ್ಷರ ಗಾತ್ರ

ಬಿಜೆಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್‌ ಮತ್ತು ಯೂಟ್ಯೂಬರ್ ಧ್ರುವ್‌ ರಾಠಿ ನಡುವೆ ನಡೆದಿದೆ ಎನ್ನಲಾದ ಫೋನ್‌ ಕರೆ ಸಂಭಾಷಣೆಯ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಮುದ್ರಿಕೆಯಲ್ಲಿ ಸ್ವಾತಿ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ವಿವರಿಸಿದ್ದಾರೆ. ಮತ್ತು ಧ್ರುವ್‌ ರಾಠಿ ಅವರಿಗೆ ಕಾಲಕಾಲಕ್ಕೆ ‘ಪೇಮೆಂಟ್‌’ ಬರುತ್ತಿದೆಯೇ ಎಂಬುದರ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಧ್ರುವ್‌ ರಾಠಿ ಅವರು ಹಣ ಪಡೆದುಕೊಂಡು ಯುಟ್ಯೂಬ್‌ನಲ್ಲಿ ವಿಡಿಯೊಗಳನ್ನು ಹರಿಬಿಡುತ್ತಿದ್ದಾರೆ ಎಂಬ ಸಂದೇಶದೊಂದಿಗೆ ಈ ಧ್ವನಿಮುದ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

ಈ ಧ್ವನಿಮುದ್ರಿಕೆಯ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಸೃಷ್ಟಿಸಲಾದ ಸಂಭಾಷಣೆಯದ್ದು ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಈ ಧ್ವನಿಮುದ್ರಿಕೆಯಲ್ಲಿ ಸ್ವಾತಿ ಅವರು ಅರವಿಂದ ಕೇಜ್ರಿವಾಲ್‌ ಅವರ ಸಮ್ಮುಖದಲ್ಲಿ ತಮ್ಮ ಮೇಲೆ ಹಲ್ಲೆ ನಡೆಯಿತು ಎಂದು ಹೇಳಿದ್ದಾರೆ. ಆದರೆ ಇದು ಬೇರೆ ಬೇರೆ ಧ್ವನಿಮುದ್ರಿಕೆಗಳನ್ನು ಬಳಸಿಕೊಂಡು ಸೃಷ್ಟಿಸಿದ ವಿಡಿಯೊ ಇದಾಗಿದೆ. ಜೋಧಪುರ ಐಐಟಿ ಅಭಿವೃದ್ಧಿಪಡಿಸಿರುವ ಎಐ ಟೂಲ್‌ ‘ಇತಿಸಾರ್‌’ ಬಳಸಿಕೊಂಡು ಪರೀಕ್ಷಿಸಿದಾಗ ಈ ಸಂಭಾಷಣೆಯ ಧ್ವನಿಮುದ್ರಿಕೆಯು ಎಐ ಬಳಸಿಕೊಂಡು ಸೃಷ್ಟಿಸಿದ್ದು ಎಂಬುದು ದೃಢಪಟ್ಟಿತು ಎಂದು ಬೂಮ್‌ಲೈವ್‌ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT