ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Fact check: ಬಾಲಕನನ್ನು ಮಕ್ಕಳ ಅಪಹರಣಕಾರರು ಕೊಂದಿರುವುದು ಸುಳ್ಳು ಸುದ್ದಿ

Published 2 ಜುಲೈ 2024, 21:52 IST
Last Updated 2 ಜುಲೈ 2024, 21:52 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಬರಸಾತ್ ಪಟ್ಟಣದಲ್ಲಿ 11 ವರ್ಷದ ಬಾಲಕ ಕಾಣೆಯಾಗಿದ್ದ. ನಾಲ್ಕು ದಿನಗಳ ನಂತರ ಬಾಲಕನ ಮೃತದೇಹ ಪತ್ತೆಯಾಗಿತ್ತು. ಆ ಬಾಲಕನನ್ನು ಮಕ್ಕಳ ಅಂಗಾಂಗ ಕಳ್ಳಸಾಗಣೆದಾರರು ಕೊಂದಿದ್ದಾರೆ ಎನ್ನುವ ವದಂತಿ ಹರಡಿತು. ಬಾಲಕನ ಚಿತ್ರ ಮತ್ತು ಮೃತದೇಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡತೊಡಗಿದವು. ಎಲ್ಲೆಡೆ ಆತಂಕ ಮೂಡಿ, ಮಕ್ಕಳ ಅಪಹರಣಕಾರರು ಎಂದು ಒಬ್ಬ ಮಹಿಳೆ ಸೇರಿದಂತೆ ಹಲವರ ಮೇಲೆ ಗುಂಪು ಹಲ್ಲೆ ನಡೆಸಿದ ಪ್ರಕರಣಗಳು ವರದಿಯಾದವು. ಆದರೆ, ಬಾಲಕನನ್ನು ಮಕ್ಕಳ ಅಪಹರಣಕಾರರು ಕೊಂದಿದ್ದಾರೆ ಎನ್ನುವುದು ಸುಳ್ಳು ಸುದ್ದಿ.

ವಾಸ್ತವವಾಗಿ, ಕೌಟುಂಬಿಕ ದ್ವೇಷಕ್ಕೆ ಸಂಬಂಧಿಸಿದಂತೆ ಬಾಲಕನ ಸಂಬಂಧಿಯೇ ಆತನನ್ನು ಕೊಂದಿದ್ದ. ಜನರು ಹಾಗೂ ಪೊಲೀಸರ ದಿಕ್ಕುತಪ್ಪಿಸಲು, ಇದು ಮಕ್ಕಳ ಅಪಹರಣಕಾರರ ಕೃತ್ಯ ಎನ್ನುವಂತೆ ಸುದ್ದಿ ಹಬ್ಬಿಸಿದ. ಮಕ್ಕಳ ಕಳ್ಳರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಮಸೀದಿಯ ಮೂಲಕ ಪ್ರಚಾರ ಮಾಡಿದ. ಆದರೆ, ಪೊಲೀಸರು ಲಭ್ಯ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿದಾಗ, ಆತನೇ ಕೊಲೆಗಾರ ಎನ್ನುವುದು ತಿಳಿದುಬಂತು. ಆತನನ್ನು ಬಂಧಿಸಿದ ಪೊಲೀಸರು, ಮಕ್ಕಳ ಅಪಹರಣಕಾರರ ವದಂತಿ ಸುಳ್ಳು ಎಂದು ಸಾರ್ವಜನಿಕ ಪ್ರಕಟಣೆಯನ್ನೂ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹರಡಿದ ಸಂಬಂಧ ನಾಲ್ವರನ್ನು ಬಂಧಿಸಿದರು. ‘ಆಲ್ಟ್ ನ್ಯೂಸ್’ ಈ ಬಗ್ಗೆ ಸ್ಥಳೀಯರನ್ನು ಮಾತನಾಡಿಸಿ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT