ಪಂಡಿತ್ ಜವಾಹರಲಾಲ್ ನೆಹರೂ ಅವರ ಕುರಿತಾಗಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿ ಮಾಡಲಾಗಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.

‘ನನ್ನ ತಾತನ ಬಗ್ಗೆ ಒಂದು ಮೆಚ್ಚಿನ ಸಂಗತಿಯಿದೆ. ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು ಮತ್ತು ಅವನ ಹೆಂಡತಿ ಇದ್ದ ಕೋಣೆಗೆ ಹೋದರು’ ಎಂಬ ವಿವರ ವೈರಲ್ ಆಗಿರುವಸ್ಕ್ರೀನ್‌ಶಾಟ್‌ನಲ್ಲಿದೆ.

ಇದು ಟ್ವೀಟ್‌ನ ತಿರುಚಲಾದ ಸ್ಕ್ರೀನ್‌ಶಾಟ್ ಎಂದು ಇಂಡಿಯಾ ಟುಡೇ ಮತ್ತು ದಿ ಕ್ವಿಂಟ್ ವೆಬ್‌ಸೈಟ್‌ಗಳು ವರದಿ ಮಾಡಿವೆ. 2021ರ ನವೆಂಬರ್ 14ರಂದು ಪ್ರಿಯಾಂಕಾ ಅವರು ನೆಹರೂ ಕುರಿತು ಟ್ವೀಟ್ ಮಾಡಿದ್ದರು. ಮೂಲ ಟ್ವೀಟ್‌ನಲ್ಲಿ, ‘ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು. ಅವನ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಒರಗಿಕೊಂಡರು’ ಎಂದಷ್ಟೇ ಇದೆ. ಕೊನೆಯ ಸಾಲನ್ನು ‘ಅವನ ಹೆಂಡತಿ ಇದ್ದ ಕೋಣೆಗೆ ಹೋದರು’ ಎಂಬುದಾಗಿ ತಿರುಚಿ, ಟ್ವೀಟ್‌ನ ಸ್ಕ್ರೀನ್‌ಶಾಟ್ ಸೃಷ್ಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.