ರೈಲ್ವೆ ಇಲಾಖೆಯ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿ ಪತ್ರ ಬಂದಿದೆ. ರೈಲ್ವೆ ಇಲಾಖೆಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ‘ಗುಮಾಸ್ತ’ ಹುದ್ದೆಯನ್ನು ನೀಡಲಾಗಿದೆ. ಈ ಕುರಿತು ಆದೇಶ ಪತ್ರವನ್ನು ಕೂಡಾ ನೀಡಲಾಗಿದೆ. ‘ನಿಮ್ಮ ಕೌಶಲ ಮತ್ತು ಹಿನ್ನೆಲೆ ನಮ್ಮ ತಂಡಕ್ಕೆ ಆಸ್ತಿ ಆಗಬಲ್ಲದು ಎಂಬ ನಂಬಿಕೆ ನಮಗಿದೆ’ ಎಂದು ಪತ್ರದ ಆರಂಭದಲ್ಲಿ ಹೇಳಲಾಗಿದೆ. ಈ ಪ್ರತದ ಒಂದು ಬದಿಗೆ ‘ರೈಲ್ವೆ ಸಚಿವಾಲಯ, ಭಾರತ ಸರ್ಕಾರ, ಬೆಂಗಳೂರು’ ಎಂದು ಅಚ್ಚು ಮಾಡಲಾಗಿದೆ’.

ಇದು ನಕಲಿ ಪ್ರಕಟಣೆ ಎಂದು ‘ಪಿಐಬಿ ಫ್ಯಾಕ್ಟ್‌ಚೆಕ್’ ವಿಭಾಗ ಟ್ವೀಟ್ ಮಾಡಿದೆ. ರೈಲ್ವೆ ಇಲಾಖೆಯ ನೇಮಕಾತಿಗಾಗಿ ‘ರೈಲ್ವೆಎಂಇನ್‌ಇಂಡಿಯ’ ವಿವಿಧ ಹಂತಗಳಲ್ಲಿ ಪರೀಕ್ಷೆ ಆಯೋಜಿಸುತ್ತದೆ. ಪರೀಕ್ಷೆ ನಡೆದ ಬಳಿಕ ಫಲಿತಾಂಶಕ್ಕೆ ಅನುಗುಣವಾಗಿ ನೇಮಕಾತಿ ಮಾಡಲಾಗುತ್ತದೆ. ನೇಮಕಾತಿ ಕುರಿತ ಸೂಚನೆಗಳನ್ನು ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿಎಸ್) ಮತ್ತು ರೈಲ್ವೆ ನೇಮಕಾತಿ ಘಟಕದ (ಆರ್‌ಆರ್‌ಸಿಎಸ್) ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುವುದು. ಈಗ ಬಂದಿರುವ ಆದೇಶ ಪತ್ರ ನಕಲಿ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.