ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check | ಮಮತಾ ಬ್ಯಾನರ್ಜಿ ಅವರಿಗೆ ಗಾಯವಾಗಿದ್ದು ನಿಜ

Published 21 ಮಾರ್ಚ್ 2024, 1:04 IST
Last Updated 21 ಮಾರ್ಚ್ 2024, 1:04 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹಣೆಯಿಂದ ರಕ್ತ ಸುರಿಯುತ್ತಿರುವ ಒಂದು ಚಿತ್ರ ಮತ್ತು ಅವರ ಹಣೆಯ ಎಡಭಾಗದಲ್ಲಿ ಬ್ಯಾಂಡ್‌ಏಡ್‌ ಹಾಕಿರುವ ಮತ್ತೊಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳ ಜತೆಗೆ, ‘ಚುನಾವಣೆಗಾಗಿ ಎಷ್ಟೆಲ್ಲಾ ಗಿಮಿಕ್‌ ಮಾಡುತ್ತಾರೆ ನೋಡಿ. ಗಾಯ ಆಗಿದ್ದು ಹಣೆಯ ಮಧ್ಯಭಾಗಕ್ಕೆ. ಆದರೆ ಬ್ಯಾಂಡ್‌ಏಡ್‌ ಹಾಕಿದ್ದು ಹಣೆಯ ಎಡಭಾಗಕ್ಕೆ. ಇವರೆಲ್ಲಾ ಎಷ್ಟು ಸುಳ್ಳುಕೋರರು ಎಂಬುದು ಇಷ್ಟರಲ್ಲೇ ಗೊತ್ತಾಗುತ್ತದೆ’ ಎಂಬ ಸಂದೇಶವನ್ನೂ ಹಂಚಿಕೊಳ್ಳಲಾಗುತ್ತಿದೆ. ಆದರೆ ಆ ಎರಡೂ ಚಿತ್ರಗಳು ಬೇರೆ ಬೇರೆ ಅವಧಿಗೆ ಸಂಬಂಧಿಸಿದವು.

ಮಮತಾ ಬ್ಯಾನರ್ಜಿ ಅವರ ಕಾರು ಇದೇ ಜನವರಿ 24ರಂದು ಸಣ್ಣ ಅಪಘಾತಕ್ಕೆ ತುತ್ತಾಗಿತ್ತು. ಆಗ ಅವರ ಹಣೆಗೆ ಸಣ್ಣ ತರಚಿದ ಗಾಯವಾಗಿತ್ತು. ಆನಂತರ ಅವರು ತಮ್ಮ ಹಣೆಯ ಎಡಭಾಗಕ್ಕೆ ಬ್ಯಾಂಡ್‌ಏಡ್‌ ಹಾಕಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅದು ಒಂದು ಚಿತ್ರ. ಮಾರ್ಚ್‌ ಎರಡನೇ ವಾರದಲ್ಲಿ ಮಮತಾ ಅವರು ತಮ್ಮ ಮನೆಯಲ್ಲೇ ಬಿದ್ದಿದ್ದರು. ಅವರ ಹಣೆಗೆ ತೀವ್ರ ಪೆಟ್ಟಾಗಿತ್ತು. ಆ ಚಿತ್ರವನ್ನು ಟಿಎಂಸಿ ಹಂಚಿಕೊಂಡಿತ್ತು. ಎರಡೂ ಭಿನ್ನ ಘಟನೆಗೆ ಸಂಬಂಧಿಸಿದ ಚಿತ್ರಗಳು. ಆದರೆ ಕೆಲವರು ಎರಡನ್ನೂ ಅಕ್ಕ–ಪಕ್ಕ ಇಟ್ಟು ಮಮತಾ ಅವರು ನಾಟಕ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT