ಜಪಾನ್ನಲ್ಲಿ ಹೊಸ ಮೆಟ್ರೊಕ್ಕೆ ಚಾಲನೆ ನೀಡುವುದಕ್ಕೂ ಮೊದಲು ಜಪಾನಿನ ಅಧಿಕಾರಿಗಳು ಹಿಂದೂ ಸಂಪ್ರದಾಯದಂತೆ ಮೆಟ್ರೊಕ್ಕೆ ಪೂಜೆ ಸಲ್ಲಿಸಿದ್ದಾರೆ ಎಂದು ಪ್ರತಿಪಾದಿಸುತ್ತಾ ಮೆಟ್ರೊ ರೈಲಿಗೆ ಆರತಿ ಬೆಳಗುವ, ತೆಂಗಿನಕಾಯಿ ಒಡೆಯುವ ವಿಡಿಯೊವನ್ನು ಬಳಕೆದಾರರೊಬ್ಬರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ, ವಿಜ್ಞಾನ–ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಜಪಾನ್ ಮುಂದಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ, ಜಪಾನ್ ಈಗಲೂ ಸನಾತನ ಧರ್ಮವನ್ನು ಪಾಲಿಸುತ್ತಿದೆ. ಅಲ್ಲಿ ಪ್ರತಿಯೊಂದು ಕೆಲಸವನ್ನೂ ವೇದ ಕಾಲದ ಸನಾತನ ಹಿಂದೂ ಧರ್ಮದ ಅನುಸಾರ ಮಾಡಲಾಗುತ್ತಿದೆ’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಇನ್ವಿಡ್ ಟೂಲ್ ಮೂಲಕ ವಿಡಿಯೊದಿಂದ ಕೀಫ್ರೇಮ್ಗಳನ್ನು ಪ್ರತ್ಯೇಕಿಸಿ ಒಂದು ಫ್ರೇಮ್ ಅನ್ನು ಗೂಗಲ್ ಲೆನ್ಸ್ ಬಳಸಿಕೊಂಡು ಹುಡುಕಾಡಿದಾಗ, ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್ ಹಂಚಿರುವುದು ಕಂಡು ಬಂತು. ಹುಡುಕಾಟವನ್ನು ಮುಂದುವರಿಸಿದಾಗ, HK_Fotage_Pro ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 2024ರ ಮಾರ್ಚ್ 9ರಂದು ಇದೇ ವಿಡಿಯೊವನ್ನು ಅಪ್ಲೋಡ್ ಮಾಡಿರುವುದು ಕಂಡು ಬಂತು. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದು ಜಪಾನಿಗೆ ಸಂಬಂಧಿಸಿದ ವಿಡಿಯೊ ಅಲ್ಲ. ಬೆಂಗಳೂರು ಮೆಟ್ರೊದ ಹಳದಿ ಮಾರ್ಗಕ್ಕೆ (ಆರ್ವಿ ರಸ್ತೆ– ಎಲೆಕ್ಟ್ರಾನಿಕ್ ಸಿಟಿ) ಪೂರೈಸಲಾದ ಚಾಲಕರಹಿತ ಮೆಟ್ರೊ ರೈಲಿಗೆ ಸಂಬಂಧಿಸಿದ್ದಾಗಿತ್ತು. ಬೆಂಗಳೂರಿನ ಹಳದಿ ಮಾರ್ಗದ ಚಾಲಕರಹಿತ ಮೆಟ್ರೊಕ್ಕೆ ಪೂಜೆ ಎಂಬ ಶೀರ್ಷಿಕೆಯನ್ನೂ ಕೊಡಲಾಗಿತ್ತು. ಮೊದಲ ಮೆಟ್ರೊ ಕೋಚ್ ಬೆಂಗಳೂರಿಗೆ ಬಂದಾಗ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಎಲ್ಲ ಪತ್ರಿಕೆಗಳೂ ವರದಿ ಮಾಡಿದ್ದವು. ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ಆರ್ಸಿ ನಂಜಿಂಗ್ ಪುಝೆನ್ ಕೊ.ಲಿ. ಕಂಪನಿಯು ಈ ರೈಲನ್ನು ನಿರ್ಮಿಸಿದೆ. ಬೆಂಗಳೂರಿನ ವಿಡಿಯೊವನ್ನು ಜಪಾನಿನಲ್ಲಿ ನಡೆದ ವಿಡಿಯೊ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಈ ವಿಡಿಯೊಕ್ಕೂ ಜಪಾನ್ಗೂ ಸಂಬಂಧವಿಲ್ಲ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.