ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಚೀಲ ಹಿಡಿದು ಹೊರಟ ವ್ಯಕ್ತಿಯ ಚಿತ್ರ ಮನೋಹರ ಲಾಲ್ ಖಟ್ಟರ್ ಅವರದ್ದಲ್ಲ

Published 21 ಮಾರ್ಚ್ 2024, 23:30 IST
Last Updated 21 ಮಾರ್ಚ್ 2024, 23:30 IST
ಅಕ್ಷರ ಗಾತ್ರ

‘ಹರಿಯಾಣದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮನೋಹರ ಲಾಲ್ ಖಟ್ಟರ್ ಅವರು ತಮ್ಮ ಅಧಿಕೃತ ನಿವಾಸವನ್ನು ತೊರೆದರು. ತಮ್ಮ ವಸ್ತುಗಳನ್ನು ತಾವೇ ಬ್ಯಾಗಿಗೆ ತುಂಬಿಕೊಂಡು ಹೊರಟರು. ಆರ್‌ಎಸ್‌ಎಸ್‌ನ ಕಟ್ಟಾಳುಗಳೆಲ್ಲರೂ ಹೀಗೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವಂತೆ, ‘ಜೋಳಿಗೆ ತೆಗೆದುಕೊಂಡು ಹೊರಟುಬಿಡುತ್ತೇನೆ’ ಎಂಬುದಕ್ಕೆ ಇದು ಉದಾಹರಣೆ’ ಎಂಬ ವಿವರದೊಂದಿಗೆ  ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

ಇಂತಹ ಪೋಸ್ಟ್‌ಗಳೊಟ್ಟಿಗೆ ಹಂಚಿಕೊಳ್ಳಲಾಗುತ್ತಿರುವ ಚಿತ್ರವು ಮನೋಹರ್‌ ಲಾಲ್ ಖಟ್ಟರ್ ಅವರದ್ದಲ್ಲ. ಗೂಗಲ್‌ ಇಮೇಜ್‌ ಸರ್ಚ್‌ನಲ್ಲಿ ಹುಡುಕಿದಾಗ ಈ ಚಿತ್ರ ತೀರಾ ಹಳೆಯದ್ದು ಎಂಬುದು ಗೊತ್ತಾಯಿತು. ಈ ಚಿತ್ರವು ಆನ್‌ಲೈನ್‌ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ 2019ರಿಂದಲೂ ಇವೆ. ಕೆಲವು ಪೋಸ್ಟ್‌ಗಳಲ್ಲಿ ಈ ವ್ಯಕ್ತಿಯನ್ನು ಬಳೆ ವ್ಯಾಪಾರಿ ಎಂದು ಕರೆದಿದ್ದರೆ, ಕೆಲವು ಪೋಸ್ಟ್‌ಗಳಲ್ಲಿ ಬಟ್ಟೆ ವ್ಯಾಪಾರಿ ಎಂದು ಕರೆಯಲಾಗಿದೆ. ಖಟ್ಟರ್ ಅವರು ರಾಜೀನಾಮೆ ನೀಡಿದ್ದು 2024ರಲ್ಲಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿರುವ ವ್ಯಕ್ತಿಯ ಚಹರೆ ಖಟ್ಟರ್ ಅವರಿಗೆ ಹೋಲುತ್ತದೆಯಾದರೂ, ಅದು ಖಟ್ಟರ್ ಅವರದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT