ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಂಕಿ’ ಚಿತ್ರದ ವಿಮರ್ಶೆಯ ಕುರಿತು ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು

Published 4 ಜನವರಿ 2024, 0:19 IST
Last Updated 4 ಜನವರಿ 2024, 0:19 IST
ಅಕ್ಷರ ಗಾತ್ರ

ನಟ ಶಾರುಕ್‌ ಖಾನ್‌ ನಟಿಸಿರುವ ‘ಡಂಕಿ’ ಚಿತ್ರದ ವಿಮರ್ಶೆ ಹಾಗೂ ಸಿನಿಮಾಗೆ ನೀಡಿದ ರೇಟಿಂಗ್‌ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿ‌ದಾಡುತ್ತಿದೆ. ಜೊತೆಗೆ, ಚಿತ್ರಮಂದಿರಗಳಿಂದ ಈ ಚಿತ್ರವನ್ನು ವೀಕ್ಷಿಸಿ ಬಂದ ಪ್ರೇಕ್ಷಕರು ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿರುವ ವಿಡಿಯೊಗಳೂ ಹರಿದಾಡುತ್ತಿವೆ. ಖ್ಯಾತ ಸಿನಿಮಾ ವಿಮರ್ಶಕ ತರಣ್‌ ಆದರ್ಶ್‌ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಎನ್ನಲಾದ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ‘ಡಂಕಿ’ಯೂ ತೀವ್ರ ನಿರಾಸೆ ಮೂಡಿಸಿದೆ’ ಎಂದಿರುವ ಬರಹ ಇದ್ದು, ಚಿತ್ರಕ್ಕೆ ಒಂದೂವರೆ ಸ್ಟಾರ್‌ ರೇಟಿಂಗ್‌ ನೀಡಲಾಗಿದೆ. ಗುಲಾಬಿ ಬಣ್ಣದ ಅಂಗಿ ಧರಿಸಿ ಚಿತ್ರದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಯು, ‘ಶಾರುಕ್‌ ಖಾನ್‌ ಅವರು ಜನರಿಗೆ ನಿರಾಶೆ ಮೂಡಿಸಿದರು’ ಎನ್ನುವ ಹಾಗೂ ಇನ್ನೊಬ್ಬ ವ್ಯಕ್ತಿಯು, ‘ವಿಶ್ವ ಪರ್ಯಟನೆಯನ್ನು ಬಾಲಿವುಡ್ ಚಿತ್ರವಾಗಿಸಲಾಗಿದೆ’ ಎಂದಿರುವ ವಿಡಿಯೊಗಳು ಕೂಡ ಹರಿದಾಡುತ್ತಿವೆ. ಆದರೆ, ಇವುಗಳು ಸುಳ್ಳು ಸುದ್ದಿಗಳಾಗಿವೆ.

ತರಣ್‌ ಆದರ್ಶ್‌ ಅವರು ಪ್ರಭಾಸ್‌ ನಟನೆಯ ‘ಆದಿಪುರುಷ’ ಚಿತ್ರದ ಕುರಿತು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದನ್ನೇ ತಿರುಚಿ, ‘ಡಂಕಿ’ ಚಿತ್ರಕ್ಕೆ ನೀಡಿದ ವಿಮರ್ಶೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇಂಥ ಪೋಸ್ಟ್‌ಗಳು ಹರಿದಾಡಲು ಆರಂಭಿಸಿದ ಹೊತ್ತಿಗೆ (ಈಗಲೂ ಪೋಸ್ಟ್‌ ಹರಿದಾಡುತ್ತಿದೆ) ತರಣ್‌ ಅವರು ‘ಡಂಕಿ’ ಚಿತ್ರವನ್ನೇ ವೀಕ್ಷಿಸಿರಲಿಲ್ಲ. ಈ ಬಗ್ಗೆ ಅವರೇ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇನ್ನು ಪ್ರೇಕ್ಷಕರು ಚಿತ್ರದ ಕುರಿತು ಮಾತನಾಡುತ್ತಿರುವ ವಿಡಿಯೊಗಳು 2017ರ ಹೊತ್ತಿನವು. ಶಾರುಕ್‌ ಅವರೇ ನಟಿಸಿರುವ ‘ಹ್ಯಾರಿ ಮೆಟ್ಸ್‌ ಸೇಜಲ್‌’ ಚಿತ್ರದ ಕುರಿತು ಪ್ರೇಕ್ಷಕರು ಮಾತನಾಡಿದ್ದ ಮಾತುಗಳವು ಎಂದು ‘ಇಂಡಿಯಾ ಟುಡೆ’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT