ಜಿ–20 ಸಮ್ಮೇಳನದಲ್ಲಿ ಭಾಗವಹಿಸಲು ಇಟಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಅವಮಾನವಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೋದಿ ಅವರನ್ನು ‘ಟ್ಯಾಕ್ಸಿ’ಯಲ್ಲಿ ಕಳುಹಿಸಿ ಅವಮಾನಿಸಲಾಗಿದೆ ಎಂಬ ವರದಿ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ‘ಟ್ಯಾಕ್ಸಿ’ ಎಂಬ ಫಲಕವಿರುವ ಕಾರನ್ನು ಮೋದಿ ಅವರು ಹತ್ತುತ್ತಿರುವ ಫೋಟೊವನ್ನು ಲಗತ್ತಿಸಲಾಗಿದೆ. ಅ.30ರಂದು ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಮೋದಿ ಭೇಟಿ ಆದ ಬಳಿಕ ಈ ಫೋಟೊ ಹೊರಬಿದ್ದಿದೆ.